ʼಲಿಯೋ’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ?

ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾಗೆ ಸಾಕಷ್ಟು ವಿಚಾರದಲ್ಲಿ ಹಿನ್ನಡೆ ಆಗುತ್ತಿದೆ. ಕರ್ನಾಟಕದಲ್ಲಿ ಕಾವೇರಿ ವಿವಾದ ಚರ್ಚೆಯಲ್ಲಿರುವುದರಿಂದ ಈ ಸಿನಿಮಾಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಇನ್ನೊಂದು ವಿಚಾರವೆಂದರೆ ‘ಲಿಯೋ’ ಸಿನಿಮಾಗೆ ಮುಂಜಾನೆ ನಾಲ್ಕು ಗಂಟೆಗೆ ಫ್ಯಾನ್ ಶೋ ಇಡಲು ತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಇದಕ್ಕೆ ಸರ್ಕಾರ ಅನುಮತಿ ನೀಡಲೇ ಇಲ್ಲ. ಅಲ್ಲದೆ ಮುಂಜಾನೆ 7 ಗಂಟೆಗೆ ಸಿನಿಮಾ ಪ್ರದರ್ಶನ ಮಾಡಲೂ ಸರ್ಕಾರ ಅವಕಾಶ ನೀಡಿಲ್ಲ.

ಈಗ ಚಿತ್ರದ ಟೈಟಲ್ ವಿಚಾರದಲ್ಲಿ ಗಲಾಟೆ ಎದ್ದಿದೆ. ಈ ಪ್ರಕರಣ ಕೋರ್ಟ್ ಅಂಗಳಕ್ಕೆ ಹೋಗಿದೆ. ಈ ಚಿತ್ರದ ರಿಲೀಸ್​ಗೆ ಕೋರ್ಟ್ ತಡೆ ನೀಡಿದೆ ಎಂದು ವರದಿ ಆಗಿದೆ. ಅ. 2೦ ರವರೆಗೆ ತೆಲುಗಿನಲ್ಲಿ ಬಿಡುಗಡೆಯನ್ನು ತಡೆಹಿಡಿಯಲು ನ್ಯಾಯಾಲಯ ತಡೆ ಆದೇಶವನ್ನು ಹೊರಡಿಸಿದೆ ಎಂದು ಕೆಲ ಮೂಲಗಳು ತಿಳಿಸಿವೆ. ಹೀಗಾಗಿ ಸಿನಿಮಾ ರಿಲೀಸ್ ಆಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ. ‘ಲಿಯೋ’ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ದಳಪತಿ ವಿಜಯ್, ತ್ರಿಶಾ ಮೊದಲಾದವರು ನಟಿಸಿದ್ದಾರೆ.

ಸಿತಾರಾ ಎಂಟರ್​ಟೇನ್​ಮೆಂಟ್​ನ ಮಾಲೀಕ ನಾಗ ವಂಶಿ ಅವರು ಕೋರ್ಟ್​ ಮೆಟ್ಟಿಲು ಏರಿದ್ದಾರೆ. ‘ಲಿಯೋ’ ಸಿನಿಮಾದ ಟೈಟಲ್ ಹಕ್ಕು ತಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಇದಕ್ಕೆ ಅವರು ದಾಖಲೆಗಳನ್ನು ಕೂಡ ನೀಡಿದ್ದಾರೆ. ಹೀಗಾಗಿ ಕೋರ್ಟ್ ಈ ಆದೇಶ ನೀಡಿದೆ ಎನ್ನಲಾಗುತ್ತಿದೆ.

Font Awesome Icons

Leave a Reply

Your email address will not be published. Required fields are marked *