ಕಳೆದ ದಿನದಿಂದ ಸೋಶಿಯಲ್ ಮಿಡಿಯಾದಲ್ಲಿ ಖ್ಯಾತ ಗಾಯಕಿ ಮಂಗ್ಲಿ ಅವರ ಮದುವೆ ಸುದ್ದಿ ಸಖತ್ ಸೌಂಡ್ ಮಾಡ್ತಿದೆ. ಮಾವನ ಮಗನ ಜೊತೆಗೆ ಸಪ್ತಪದಿ ತುಳೀತಾರಂತೆ ಅಂತ ಎಲ್ಲ ಕಡೆ ಹೈಪ್ ಕ್ರಿಯೇಟ್ ಆಯ್ತು. ಆದ್ರೆ ಈ ಸುದ್ದಿಗೆ ಮಂಗ್ಲಿ ಕೆಂಡಾಮಂಡಲವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ಎಲ್ಲಾ ನನ್ ಕರ್ಮ’ ಅಂತ ಸಿಟ್ಟಲ್ಲಿ ಹೇಳಿದ್ದಾರೆ. ಮಂಗ್ಲಿ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಗಾಯಕಿಗೆ ಶುಭಾಶಯ ಕೋರುತ್ತಿದ್ದಾರೆ. ಈ ಬಗ್ಗೆ ಮಂಗ್ಲಿ ಪ್ರತಿಕ್ರಿಯಿಸಿದ್ದಾರೆ.
‘ಇದೆಲ್ಲಾ ಬರೀ ವದಂತಿ’ ಎಂದು ಆಕೆ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಮದುವೆನಾ? ಅಯ್ಯೋ ನನ್ನ ಕರ್ಮ.. ಯಾವ ಮದುವೆನೂ ಇಲ್ಲ. ಇದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿ. ನನ್ನ ಭಾವನನ್ನು ನಾನು ಮದುವೆ ಆಗೋದಾ? ಅದ್ಯಾರು ನನ್ನ ಭಾವ? ಆ ಸುದ್ದಿ ಹಬ್ಬಿಸಿದವರನ್ನೇ ತೋರ್ಸೋಕೆ ಹೇಳಿ’ ಎಂದು ಗರಂ ಆಗಿದ್ದಾರೆ. ಜೊತೆಗೆ ‘ಸದ್ಯಕ್ಕೆ ಮದುವೆ ಆಲೋಚನೆಯೇ ಇಲ್ಲ’ ಎಂದು ಮಂಗ್ಲಿ ಹೇಳಿದ್ದಾರೆ.