ʼಸಪ್ತಸಾಗರದಾಚೆ ಎಲ್ಲೊ ಪಾರ್ಟ್ 2ʼ ರಿಲೀಸ್ ಯಾವಾಗ ?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಭಾಗ 1 ರಿಲೀಸ್ ಆಗಿ ತಿಂಗಳು ಕಳೆದಿದೆ. ಇದೀಗ ಪಾರ್ಟ್ 2 ಗಾಗಿ ಜನ ಕಾದಿದ್ದಾರೆ. ಇದಕ್ಕೆ ಮೊದಲು ಅಕ್ಟೋಬರ್ ನಲ್ಲಿ ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ಬಿಡುಗಡೆಯಾಗುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಇದುವರೆಗೆ ಆ ಬಗ್ಗೆ ಯಾವುದೇ ಪ್ರಚಾರ ಶುರು ಮಾಡಿಲ್ಲ.

ಹೀಗಾಗಿ ಸೈಡ್ ಬಿ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಲಿದೆ ಎನ್ನಲಾಗುತ್ತಿದೆ. ಸೈಡ್ ಎ ಗೆ ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಸೈಡ್ ಬಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ ಎನ್ನಲಾಗಿದ್ದು, ಇದಕ್ಕೇ ಬಿಡುಗಡೆ ನವಂಬರ್ ಗೆ ಮುಂದೂಡಿಕೆಯಾಗಬಹುದು ಎನ್ನಲಾಗುತ್ತಿದೆ.
Font Awesome Icons

Leave a Reply

Your email address will not be published. Required fields are marked *