‘ಆರ್​ಆರ್​ಆರ್’​ ಸಿನಿಮಾ ನೋಡಿದ್ದೀರಾ ಎಂದು ಕೇಳುತ್ತಾರೆ ಎಂದ ಬ್ರೆಜಿಲ್‌ ಅಧ್ಯಕ್ಷ

ನವದೆಹಲಿ: ಮುಂದಿನ ವರ್ಷ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಗೆ ವರ್ಗಾಯಿಸುವ ಮೂಲಕ ದೆಹಲಿಯಲ್ಲಿ ಎರಡು ದಿನಗಳ ಜಿ20 ಶೃಂಗಸಭೆ ಇಂದು ಭಾನುವಾರ ಮುಕ್ತಾಯಗೊಂಡಿದೆ.

ಜಿ 20 ಅಧ್ಯಕ್ಷ ಸ್ಥಾನದ ಅಧಿಕಾರದ ದಂಡವನ್ನು ವಿದ್ಯುಕ್ತವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ರೆಜಿಲ್ ಅಧ್ಯಕ್ಷರು, ಆರ್ಥಿಕತೆಗಳ ಹಿತಾಸಕ್ತಿಗಳ ವಿಷಯಗಳಿಗೆ ಧ್ವನಿ ನೀಡುತ್ತಿರುವ ಭಾರತವನ್ನು ಶ್ಲಾಘಿಸಿದರು. ಅದೇ ರೀತಿ ಜಿ.20 ಶೃಂಗಸಭೆಗೆ ಆಗಮಿಸಿದ ಗಣ್ಯರು ಭಾರತದ ಸಂಸ್ಕೃತಿ, ಆಚಾರ ವಿಚಾರ ಆಹಾರ ಪದ್ಧತಿಗಳನ್ನು ಮನಸಾರೆ ಶ್ಲಾಘಿಸಿದ್ದಾರೆ.

ಆದರೆ ಬ್ರೆಜಿಲ್‌ ಅಧ್ಯಕ್ಷ ಭಾರತೀಯ ಸಿನಿಮಾ ಆರ್‌ಆರ್‌ಆರ್‌ ಬಗ್ಗೆ ಮಾತನಾಡಿದ್ದು, ಚಿತ್ರವನ್ನು ಬಾಯ್ತುಂಬ ಹೊಗಳಿದ್ದಾರೆ. ಆರ್​ಆರ್​ಆರ್​ ಮೂರು ಗಂಟೆಯ ಫೀಚರ್ ಸಿನಿಮಾ. ಹಲವು ಫನ್ನಿ ದೃಶ್ಯ ಇದೆ. ಅದ್ಭುತ ನೃತ್ಯವಿದೆ. ಬ್ರಿಟಿಷರ ಆಡಳಿತದ ಬಗ್ಗೆ ತೀವ್ರ ಟೀಕೆಯೂ ಇದೆ. ಈ ಚಿತ್ರ ವಿಶ್ವಾದ್ಯಂತ ಬ್ಲಾಕ್​ಬಸ್ಟರ್ ಸಿನಿಮಾ ಆಗಬೇಕು ನನ್ನ ಅಭಿಪ್ರಾಯ. ಭಾರತದ ಬಗ್ಗೆ ಯಾರೇ ಪ್ರಸ್ತಾಪಿಸಿದರೂ ನೀವು ‘ಆರ್​ಆರ್​ಆರ್’​ ಸಿನಿಮಾ ನೋಡಿದ್ದೀರಾ ಎಂದು ಕೇಳುತ್ತಾರೆ. ಚಿತ್ರದ ನಿರ್ದೇಶಕರು ಮತ್ತು ಕಲಾವಿದರನ್ನು ನಾನು ಅಭಿನಂದಿಸುತ್ತೇನೆ. ಈ ಸಿನಿಮಾ ನನ್ನನ್ನು ಮೋಡಿ ಮಾಡಿದೆ’ ಎಂದಿದ್ದಾರೆ ಲೂಯಿಸ್ ಇನಾಸಿಯೋ ಲೂಲಾ ದೆ ಸೆಲ್ವಾ.

Font Awesome Icons

Leave a Reply

Your email address will not be published. Required fields are marked *