ಆಸ್ಕರ್‌ ಗೆ ಅಧಿಕೃತ ಎಂಟ್ರಿ ಪಡೆದ ಮಲಯಾಳಂನ “2018” ಚಿತ್ರ

ಮುಂಬೈ: 96ನೇ ಆಸ್ಕರ್‌ ಅವಾರ್ಡ್ಸ್‌ ಸಮಾರಂಭಕ್ಕೆ ಭಾರತದಿಂದ ಮಲಯಾಳಂ ಸಿನಿಮಾವೊಂದು ಅಧಿಕೃತವಾಗಿ ಪ್ರವೇಶ ಪಡೆದಿದೆ. ಈ ಬಗ್ಗೆ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಘೋಷಣೆ ಮಾಡಿದೆ. ಈ ಚಿತ್ರವನ್ನು ಜೂಡಾ ಆಂಥೋನಿ ಜೋಸೆಫ್‌ ಅವರು ನಿರ್ದೇಶನ ಮಾಡಿದ್ದು,. ಕೇರಳ ಪ್ರವಾಹ ಕುರಿತಾದ ಸಿನಿಮಾ ಕಥಾಹಂದರ ಹೊಂದಿತ್ತು. ಈ ಚಿತ್ರದಲ್ಲಿ ಟೊವಿನೋ ಥಾಮಸ್, ಕುಂಚಾಕೊ ಬೋಬನ್, ಆಸಿಫ್ ಅಲಿ, ವಿನೀತ್ ಶ್ರೀನಿವಾಸನ್, ನರೇನ್ ಮತ್ತು ಲಾಲ್ ನಟಿಸಿದ್ದಾರೆ.

2018 ಈ ವರ್ಷ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿತ್ತು. ಅಲ್ಲದೆ ಅತಿ ಹೆಚ್ಚು ಗಳಿಕೆಯನ್ನು ಗಳಿಸಿದ ಮಲಯಾಳಂ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಲನಚಿತ್ರ ನಿರ್ಮಾಪಕ ಮತ್ತು ಭಾರತದಿಂದ ಆಸ್ಕರ್‌ ಗೆ ಸಿನಿಮಾ ಆಯ್ಕೆ ಮಾಡುವ ಸಮಿತಿಯ ಅಧ್ಯಕ್ಷ ಗಿರೀಶ್ ಕಾಸರವಳ್ಳಿ, ಹವಾಮಾನ ಬದಲಾವಣೆಯ ಪರಿಣಾಮಗಳ ವಿಷಯಕ್ಕಾಗಿ ಮಲಯಾಳಂ ಚಲನಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಕೇರಳ ಸ್ಟೋರಿ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಶ್ರೀಮತಿ ಚಟರ್ಜಿ Vs ನಾರ್ವೆ, ತೆಲುಗು ಚಿತ್ರ ಬಲಗಮ್, ಮರಾಠಿ ಚಿತ್ರಗಳಾದ ವಾಲ್ವಿ ಮತ್ತು ಬಾಪ್ಲಿಯೋಕ್ ಮತ್ತು ಆಗಸ್ಟ್ 16, 1947 (ತಮಿಳು) ಸೇರಿದಂತೆ 22 ಚಿತ್ರಗಳನ್ನು ಆಸ್ಕರ್‌ ಗೆ ಪರಿಗಣಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *