ಇಂದಿನಿಂದ ಬಿಗ್ ಬಾಸ್ ಕನ್ನಡ ಸೀಸನ್ 10 ಶುರು: ಯಾವ ಸ್ಪರ್ಧಿಗಳು ಇರುತ್ತಾರೆ ಗೊತ್ತ ?

ಬೆಂಗಳೂರು: ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಅ.8ರ ಇಂದಿನಿಂದ ಶುರುವಾಗಲಿದೆ. ಎಂದಿನಂತೆಯೇ ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಈ ಎಲ್ಲ ವಿಚಾರಗಳ ಮಧ್ಯೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರತಿ ಬಾರಿಯಂತೆ ಬಿಗ್‌ ಬಾಸ್‌ 100 ದಿನದ ಆಟವನ್ನು ಗೆದ್ದವರು ವಿನ್ನರ್‌ ಟ್ರೋಫಿ ಜೊತೆಗೆ ಕ್ಯಾಶ್‌ ಪ್ರೈಸ್‌ ಪಡೆಯುತ್ತಾರೆ. ಪ್ರತಿ ಸೀಸನ್‌ನಲ್ಲಿ ನೀಡುವಂತೆ ಈ ಬಾರಿಯೂ ಬಿಗ್​ ಬಾಸ್ ಗೆದ್ದವರಿಗೆ 50 ಲಕ್ಷ ಪ್ರೈಸ್ ಮನಿ ಸಿಗಲಿದೆ. ಅಲ್ಲದೇ ಟಾಸ್ಕ್‌ ಗೆದ್ದವರಿಗೂ ಸಹ ಹಣವನ್ನು ಬಹುಮಾನವಾಗಿ ನೀಡುತ್ತಿದ್ದಾರೆ. ಈ ಬಾರಿ ಹೊಸದಾಗಿ ಬಿಗ್ ಬಾಸ್​ ಮನೆ ನಿರ್ಮಾಣವಾಗಿದೆ. ಹೊಸ ಮನೆಯಲ್ಲಿ ಹೊಸ ಆಟ ಹೊಸ ಸ್ಪರ್ಧಿಗಳು ಕಿರುತೆರೆಯ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದ್ದಾರೆ.

ಇಂದು ಸಂಜೆಯಿಂದ ಬಿಗ್ ಬಾಸ್ ಆಟ ಶುರುವಾಗಲಿದೆ. ಅದಕ್ಕೂ ಮುನ್ನ ದೊಡ್ಮನೆಗೆ ಎಂಟ್ರಿ ಕೊಡುವವರ ಲಿಸ್ಟ್ ಹೊರ ಬೀಳುತ್ತಲೇ ಇದೆ. ಸಾಮಾನ್ಯ ಜನರ ಪ್ರವೇಶಕ್ಕಿಂತ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರ ಹೆಸರು ಮುಂಚೂಣೆಯಲ್ಲಿವೆ. ಕನ್ನಡತಿ ಖ್ಯಾತಿ ರಂಜನಿ ರಾಘವನ್ , ಬುಲೆಟ್ ಪ್ರಕಾಶ್ ಪುತ್ರ ರಕ್ಷಿಕ್, ನಮ್ರತಾ ಗೌಡ, ಸುಕೃತಾ ನಾಗ್, ಭವ್ಯ ಗೌಡ, ಅದ್ವಿತಿ ಶೆಟ್ಟಿ, ಆಶಾ ಭಟ್, ನಟ ವಿನಯ್ ಗೌಡ ಸೇರಿದಂತೆ ಮುಂತಾದವರ ಹೆಸರು ಕೇಳಿ ಬಂದಿವೆ. ಜೊತೆಗೆ ನ್ಯೂಸ್ ಆ್ಯಂಕರ್ ಒಬ್ಬರ ಹೆಸರು ಕೇಳಿ ಬಂದಿದೆ. ಆದರೆ, ಅವರಾರು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲವೆಂದು ಸ್ಪಷ್ಟನೆ ನೀಡಲಾಗಿದೆ. ಆದರೂ ಕಾದು ನೋಡಬೇಕಿದೆ.

Font Awesome Icons

Leave a Reply

Your email address will not be published. Required fields are marked *