ಕೇರಳ ಸ್ಟೋರಿ ಸಿನಿಮಾ ದ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದ ನಟಿ ಅದಾ ಶರ್ಮಾ ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಬೇಸರವುಂಟು ಮಾಡಿದೆ. ಜೇನುಗೂಡುಗಳು ಎಂದೂ ಕರೆಯಲ್ಪಡುವ ಉರ್ಟೇರಿಯಾ ಎಂಬ ಚರ್ಮದ ಕಾಯಿಲೆಯಿಂದ ಅದಾ ಶರ್ಮ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.
ಇದು ಚರ್ಮದ ಮೇಲೆ ಊದಿಕೊಂಡ ಕೆಂಪು ಅಥವಾ ಚರ್ಮದ ಬಣ್ಣದ ಉಬ್ಬುಗಳು ಕಾಣಿಸಿಕೊಳ್ಳುತ್ತವೆ. ತುರಿಕೆಯಿಂದ ಪ್ರಾರಂಭವಾಗಿ ಸುಡುವುದು ಹಾಗೂ ಚರ್ಮದ ಹಾನಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಇದು ಕೈಗಳು, ಮುಖ, ತುಟಿ, ಕಿವಿಗಳು, ಗಂಟಲು ಅಥವಾ ನಾಲಿಗೆ ಸೇರಿದಂತೆ ದೇಹದ ಮೇಲೆ ಎಲ್ಲಿಯಾದರೂ ಕಾಣಿಸಿಕೊಳ್ಳಬಹುದು. ಮಳೆಗಾಲವು ಪ್ರಾರಂಭವಾಗಿರುವುದರಿಂದ ಇಂತಹ ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತದೆ.