ಮುಂಬೈ: ನಟಿ ಕಂಗನಾ ರಣಾವತ್ ನಟಿಸುವ ಚಿತ್ರಗಳು ಒಂದರ ಮೇಲೊಂದರಂತೆ ಫ್ಲಾಪ್ ಆಗುತ್ತಿವೆ. ಉತ್ತಮ ವಿಷಯವನ್ನು ಇಟ್ಟುಕೊಂಡು ಚಿತ್ರ ಮಾಡಿದರೂ ಅದ್ಯಾಕೋ ಯಶಸ್ಸೇ ಕಾಣಿಸುತ್ತಿಲ್ಲ.
ಇದೀಗ ಅವರ ಬಹು ನಿರೀಕ್ಷೆಯ ತೇಜಸ್ ಚಿತ್ರಕ್ಕೂ ಇದೇ ಗತಿಯಾಗಿದೆ! ಇದೇ 27ರಂದು ಚಿತ್ರ ಬಿಡುಗಡೆಯಾದರೂ ಭಾರಿ ಫ್ಲಾಪ್ ಆದಂತಿದೆ. ಪ್ರೇಕ್ಷಕರ ಕೊರತೆಯಿಂದಾಗಿ ಭಾರತದಾದ್ಯಂತ 95 ಪ್ರತಿಶತ ಪ್ರದರ್ಶನಗಳನ್ನು (ಬೆಳಿಗ್ಗೆ 10:30 ಗಂಟೆಗೆ) ರದ್ದುಗೊಳಿಸಲಾಗಿದೆ. ತೇಜಸ್ ಮೊದಲ ದಿನವೇ ಅತ್ಯಂತ ಕಳಪೆ ಮುಂಗಡ ಬುಕ್ಕಿಂಗ್ ಪಡೆದಿದೆ.
ಇದೀಗ ಬಾಲಿವುಡ್ನ ವಿವಾದಾತ್ಮಕ ವಿಮರ್ಶಕ ಕಮಲ್ ಆರ್.ಖಾನ್ ಕಂಗನಾ ಮತ್ತು ಅವರ ತೇಜಸ್ ಚಿತ್ರದ ಕುರಿತು ಅಪಹಾಸ್ಯ ಮಾಡಿದ್ದಾರೆ. ಕಂಗನಾ ದೀದೀ ನಿಮ್ಮ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮುಂದಿನ ಸಲ ನಿಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಬೇಡಿ. ಈ ಬಾಲಿವುಡ್ನವರು ನಿಮ್ಮನ್ನು ಬಿಡುವುದಿಲ್ಲ ಎಂದು ನಟಿಗೆ ಅಪಹಾಸ್ಯ ಮಾಡಿದ್ದಾರೆ. ಗದರ್, ಪಠಾಣ್, ಜವಾನ್ ಸಿನಿಮಾದ ಎಲ್ಲ ರೆಕಾರ್ಡ್ಗಳನ್ನು ತೇಜಸ್ ಸಿನಿಮಾ ಮುರಿಯಬೇಕಿತ್ತು. ಆದ್ರೆ ತೇಜಸ್ ಸಿನಿಮಾ ಲೈಫ್ಟೈಮ್ ಗಳಿಕೆಯೇ 2 ಕೋಟಿಯಷ್ಟೇ ಎಂದು ತಮಾಷೆ ಮಾಡಿದ್ದಾರೆ.
This Review of #Tejas is more entertaining than the movie itself
😂😂 pic.twitter.com/Us5kjdBbon— Nimo Tai (@Cryptic_Miind) October 27, 2023