ಕದ್ದುಮುಚ್ಚಿ ಬೇರೆಯವರ ಜೊತೆ ಸುತ್ತಾಡಿದ್ದ ದೀಪಿಕಾ: ಶೋ ನಲ್ಲಿ ಸಿಟ್ಟಾದ ರಣವೀರ್

ಮುಂಬೈ:  ‘ರಾಮ್ ಲೀಲಾ’ ರಿಲೀಸ್ ಆದ ಬಳಿಕ ರಣವೀರ್ ಸಿಂಗ್ ಅವರು ದೀಪಿಕಾಗೆ ಪ್ರಪೋಸ್ ಮಾಡಿದ್ದರು. ದ್ವೀಪ ಒಂದಕ್ಕೆ ಕರೆದುಕೊಂಡು ಹೋಗಿ ರಿಂಗ್ ನೀಡಿ ರಣವೀರ್ ಮದುವೆ ಪ್ರಪೋಸಲ್ ಇಟ್ಟಿದ್ದರು. ನಂತರ ಮನೆಯವರನ್ನು ಒಪ್ಪಿಸಿ ಇವರು ಮದುವೆ ಆಗಿದ್ದು, ಇದೀಗ ದೀಪಿಕಾ ಕಾಫಿ ವಿತ್​ ಕರಣ್​ ಶೋನಲ್ಲಿ ನೀಡಿರುವ ಹೇಳಿಕೆ ರಣ್​ವೀರ್​​​​ ಸಿಂಗ್​ಗೆ ಸಿಟ್ಟು ತರಿಸಿದೆ.

ಶೋ ಮಧ್ಯೆ ಕರಣ್​ ಜೋಹರ್​​ ನೀವಿಬ್ಬರೂ ಯಾವಾಗ ರಿಲೇಶನ್​ಶಿಪ್​ನಲ್ಲಿ ಇದ್ದೀರಿ ಅನ್ನೋದು ಇಬ್ಬರಿಗೂ ಖಚಿತವಾಯಿತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ದೀಪಿಕಾ ಉತ್ತರಿಸಿದ್ದಾರೆ. ‘ಕೆಲವು ಕಾಂಪ್ಲಿಕೇಟೆಡ್​ ರಿಲೇಶನ್​ಶಿಪ್​ನಿಂದ ನಾನು ಆಗಷ್ಟೇ ಹೊರ ಬರೋಕೆ ಪ್ರಯತ್ನಿಸುತ್ತಿದೆ. ನಾನು ಯಾವುದೇ ರಿಲೇಶನ್​​ಶಿಪ್​​ನಲ್ಲಿ ಇರಬಾರದು ಎಂದು ನಿರ್ಧರಿಸಿದ್ದೆ.

ಅಂತಹ ದಿನಗಳನ್ನ ಕಳೆಯುವಾಗ ರಣ್​ವೀರ್​​ ನನ್ನ ಜೀವನದಲ್ಲಿ ಆಗಮಿಸಿದ್ರು. ಆದ್ರೆ ನಾನು ಅವರನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.  ನಮ್ಮಿಬ್ಬರ ನಡುವೆ   ಮದುವೆಯಾಗುವ ಕಮಿಟ್​​ಮೆಂಟ್​​ ಇರಲಿಲ್ಲ. ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್​ಮೆಂಟ್ ಇರಲಿಲ್ಲ. ನಾನು ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್​ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ಹಾಗಾಗಿ ನಾನು ಬೇರೆ ಹುಡುಗರನ್ನ ಮೀಟ್​ ಮಾಡುತ್ತಿದ್ದರೂ ಮರಳಿ ರಣ್​ವೀರ್​​ ಬಳಿಗೇ ಬರುತ್ತಿದ್ದೆ ಎಂದಿದ್ದಾರೆ ದೀಪಿಕಾ. ಇನ್ನು ಈ ಪ್ರಶ್ನೆಗೆ ರಣ್​ವೀರ್​ ಸಿಂಗ್​ ಸಹ ಉತ್ತರಿಸಿದ್ದು, ನಾವು ಡೇಟ್​ಗೆ ಹೋಗುತ್ತಿದ್ದೆವು. ಒಟ್ಟಿಗೆ ರಜಾ ಕಳೆದಾಗ, ಹೊಸ ವರ್ಷ ಆಚರಿಸಿದಾಗ ಒಟ್ಟಿಗೆ ಇದ್ದ ಭಾವನೆ ಬರುತ್ತದೆ. ಮೊದಲ ಆರು ತಿಂಗಳಲ್ಲಿ ಕೆಲವರು ದೀಪಿಕಾನ ಮದುವೆ ಆಗಲು ಸತತ ಪ್ರಯತ್ನಗಳನ್ನ ನಡೆಸುತ್ತಿದ್ದರು’ ಎಂದಿದ್ದಾರೆ ರಣವೀರ್ ಸಿಂಗ್. ಇನ್ನು ದೀಪಿಕಾ ಮೀಟ್​​ ಮಾಡುತ್ತಿದ್ದ ಆ ಮೂವರು ಯಾರು ಎಂಬ ಪ್ರಶ್ನೆ ಬಂದಾಗ ರಣ್​ವೀರ್​​ಗೆ ಕೋಪ ಬಂದಂತಿದೆ.

‘ನಾನು ಬೇರೆಯವರನ್ನ ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದೆ ಎಂದು ಈಗತಾನೇ ನೀನು ಹೇಳಿದೆ. ಈಗ ಅದು ನೆನಪಿಲ್ಲವೇ?’ ಎಂದು ರಣವೀರ್ ಸಿಂಗ್ ಪ್ರಶ್ನೆ ಮಾಡಿದರು. ದೀಪಿಕಾ ಕಡೆಯಿಂದ ‘ಇಲ್ಲ’ ಎನ್ನುವ ಉತ್ತರ ಬಂತು. ‘ನನಗೆ ಸರಿಯಾಗಿ ನೆನಪಿದೆ’ ಎಂದರು ರಣವೀರ್ ಸಿಂಗ್ ಸಿಟ್ಟಲ್ಲೇ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *