ಕನ್ನಡದ ʼಘೋಸ್ಟ್‌ʼ ಅನ್ನು ಭೇಟಿಯಾದ ತಮಿಳಿನ ʼಘೋಸ್ಟ್‌ʼ

ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ಅಭಿನಯದ `ಘೋಸ್ಟ್‌’ ಸಿನಿಮಾ ಇದೇ ಅ. 19ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗುತ್ತಿದೆ. ಇದೀಗ ಈ ಘೋಸ್ಟ್‌ , ತಮಿಳಿನ `ಘೋಸ್ಟ್‌’ ಅನ್ನು ಭೇಟಿಯಾಗಿದೆ. ಕಮಲ್ ಹಾಸನ್​ ತಮ್ಮ ಈ ಹಿಂದಿನ ಸಿನಿಮಾ ‘ವಿಕ್ರಂ’ನಲ್ಲಿ ‘ಘೋಸ್ಟ್’ ಆಗಿ ಕಾಣಿಸಿಕೊಂಡಿದ್ದರು. ಕಮಲ್ ಅವರನ್ನು ಭೇಟಿಯಾದ ಕ್ಷಣವನ್ನು ಶಿವಣ್ಣ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಒನ್ಸ್ ಅಪಾನ್ ಎ ಟೈಮ್ ದೇರ್ ಲಿವ್ಡ್ ಎ ಘೋಸ್ಟ್’ ಎಂದು ಕಮಲ್​ರ ‘ವಿಕ್ರಂ’ ಸಿನಿಮಾದ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯವನ್ನು ಭರದಿಂದ ಮಾಡುತ್ತಿದೆ. ‘ಘೋಸ್ಟ್’ ಸಿನಿಮಾವನ್ನು ಮುಂಬೈನಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಕಮಲ್ ಹಾಸನ್ ಸಿಕ್ಕರು ಎಂದು ಶಿವಣ್ಣ ಎಂದು ಬರೆದುಕೊಂಡಿದ್ದಾರೆ.

ಇನ್ನು ಇನ್ನೊಂದು ವಿಚಾರವೆಂದರೇ, ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಈ ಸಿನಿಮಾ ಮತ್ತೆ ಸುದ್ದಿಯಲ್ಲಿದೆ .”ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.

Font Awesome Icons

Leave a Reply

Your email address will not be published. Required fields are marked *