ಕನ್ನಡಿಗರ ಗಮನ ಸೆಳೆದ ರಿಷಬ್ ಶೆಟ್ಟಿ & ಜ್ಯೂ.ಎನ್​ಟಿಆರ್​

ದುಬೈನಲ್ಲಿ 2023ನೇ ವರ್ಷದ ಸೈಮಾ ಪ್ರಶಸ್ತಿಗಳ ಸಮಾರಂಭ ನಡೆದಿದೆ.  ಈ ಸಂಭ್ರಮದಲ್ಲಿ ಕನ್ನಡಿಗರಿಗೆ ತುಂಬಾ ವಿಶೇಷವಾಗಿ ಗಮನ ಸೆಳೆದಿದ್ದು ರಿಷಬ್ ಶೆಟ್ಟಿ ಹಾಗೂ ಜ್ಯೂನಿಯರ್ ಎನ್​ಟಿಆರ್​ ನಡುವೆ ನಡೆದ ಕನ್ನಡ ಸಂಭಾಷಣೆ.

ಸೆ.15ರಂದು ದುಬೈನಲ್ಲಿ 2023ನೇ ವರ್ಷದ ಸೈಮಾ ಪ್ರಶಸ್ತಿಗಳ ಸಮಾರಂಭ ನಡೆದಿತ್ತು. ತೆಲುಗು ಮತ್ತು ಕನ್ನಡ ಇಂಡಸ್ಟ್ರಿಯ ಸಾಕಷ್ಟು ಕಲಾವಿದರು ಭಾಗಿವಹಿಸಿದ್ದರು. ಈ ವೇಳೆ ಜ್ಯೂನಿಯರ್ ಎನ್​ಟಿಆರ್ ಮತ್ತು ಕನ್ನಡ ನಟ ರಿಷಬ್ ಶೆಟ್ಟಿ ಪರಸ್ಪರ ಕನ್ನಡದಲ್ಲಿ ಮಾತಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು,  ಕನ್ನಡಿಗರ ಮನ ಗೆದ್ದಿದೆ. ಕಾಂತಾರ ಸಿನಿಮಾದ ನಟನೆ ಹಾಗೂ ನಿರ್ದೇಶನಕ್ಕಾಗಿ ರಿಷಬ್ ಶೆಟ್ಟಿ ಪ್ರಶಸ್ತಿ ಪಡೆದುಕೊಂಡರು. ಈ ವೇಳೆ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಜ್ಯೂನಿಯರ್ ಎನ್​ಟಿಆರ್​, ರಿಷಬ್ ಶೆಟ್ಟಿ ಅವರನ್ನು ಕನ್ನಡದಲ್ಲಿ ಮಾತಾಡಿಸಿದ್ದಾರೆ.

ʼರಿಷಬ್ ನೋಡಿ ಹೇಗಿದ್ದೀರಾ ಸರ್’ ಅಂತ ಕನ್ನಡದಲ್ಲಿ ಕೇಳಿ ಅಭಿನಂದಿಸಿದ್ದಾರೆ. ಅದಕ್ಕೆ ರಿಷಬ್ ಸಹ ಕನ್ನಡದಲ್ಲೇ ‘ಚೆನ್ನಾಗಿದ್ದೀನಿ ಸರ್’ ಎಂದಿದ್ದಾರೆ. ಅಷ್ಟರಲ್ಲೇ ಮಧ್ಯ ಪ್ರವೇಶಿಸಿದ ನಿರೂಪಕ ಅಕುಲ್ ಬಾಲಾಜಿ ಸರ್ ಕುಂದಾಪುರದಲ್ಲಿ ಹೀಗೇ ಮಾತಾಡ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಜ್ಯೂನಿಯರ್ ಎನ್​ಟಿಆರ್ ನಮ್ಮ ಅಮ್ಮನ ಜೊತೆಯೂ ಹೀಗೆ ಮಾತಾಡ್ತೀನಿ ಎಂದಿದ್ದಾರೆ. ಹೀಗೆ ಮಾತು ಮುಂದುವರಿಸಿದ ರಿಷಬ್ ಶೆಟ್ಟಿ ‘ಸರ್ ನಿಮ್ಮನ್ನು ನೇರವಾಗಿ ಭೇಟಿ ಮಾಡಿ ಧನ್ಯವಾದ ತಿಳಿಸಲು ಸಾಧ್ಯವಾಗಲಿಲ್ಲ. ಕಿರಿಕ್ ಪಾರ್ಟಿ ತಂಡ ಬಂದಾಗ ನೀವೇ ಪ್ರಶಸ್ತಿ ಕೊಟ್ಟಿದ್ದೀರಿ. ನಿಮ್ಮ ತಾಯಿ, ನಮ್ಮೂರು ಒಂದೇ ಆಗಿರೋದ್ರಿಂದ ನಾವೆಲ್ಲಾ ಒಂದು ಕುಂದಾಪುರದವರು’’ ಎಂದು ಸಂತಸ ಹಂಚಿಕೊಂಡರು.

 

Font Awesome Icons

Leave a Reply

Your email address will not be published. Required fields are marked *