ಚೆನ್ನೈ: ಕಮಲ್ ಹಾಸನ್ ಅವರ ʼಇಂಡಿಯನ್ -2ʼ ಸಿನಿಮಾದ ಸ್ಪೆಷೆಲ್ ಅಪ್ಡೇಟ್ ರಿವೀಲ್ ಗೆ ಕ್ಷಣಗಣನೆ ಬಾಕಿ ಉಳಿದಿದೆ. ಶುಕ್ರವಾರ(ನ.3 ರಂದು) ʼಇಂಡಿಯನ್ -2ʼ ಇಂಟ್ರೋ(ಟೀಸರ್) ರಿಲೀಸ್ ಆಗಲಿದೆ.
1996ರಲ್ಲಿ ಬಿಡುಗಡೆ ಆಗಿದ್ದ ‘ಇಂಡಿಯನ್’ ಸಿನಿಮಾದಲ್ಲಿ ಸೇನಾಪತಿ ಹಾಗೂ ಚಂದ್ರಭೋಸ್ ಪಾತ್ರದಲ್ಲಿ ಮಿಂಚಿದ್ದರು. ಆ ಸಿನಿಮಾದಲ್ಲಿ ಆಗಿನ ಕಾಲದ ಸೂಪರ್ ಸ್ಟಾರ್ ನಟಿಯರಾಗಿದ್ದ ಮನಿಷಾ ಕೊಯಿರಾಲಾ, ಊರ್ಮಿಳಾ ಮತೋಡ್ಕರ್ ಅವರುಗಳು ನಾಯಕಿಯರಾಗಿ ನಟಿಸಿದ್ದರು. ಆ ಸಿನಿಮಾದ ಮುಂದುವರೆದ ಭಾಗವಾಗಿರುವ ಇದೀಗ ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ‘ಇಂಡಿಯನ್-2’ ಚಿತ್ರದ ಇಂಟ್ರೋ ವೀಡಿಯೋ ನವೆಂಬರ್ 3 ರಂದು ಬಿಡುಗಡೆ ಆಗುತ್ತಿದೆ.
ಕನ್ನಡದಲ್ಲಿ ಕಿಚ್ಚ ಸುದೀಪ್, ತಮಿಳಿನಲ್ಲಿ ರಜನಿಕಾಂತ್, ಹಿಂದಿ ಆಮಿರ್ ಖಾನ್, ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಮೋಹನ್ ಲಾಲ್ ಇಂಡಿಯನ್-2 ಸಿನಿಮಾದ ಇಂಟ್ರೋ ವಿಡಿಯೋ ಅನಾವರಣ ಮಾಡಲಿದ್ದಾರೆ.