ಕೊರಗತನಿಯ ಆದಿ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಟ ಕೋಮಲ್

ಉಳ್ಳಾಲ: ಸಿನೆಮಾ ಶೂಟಿಂಗ್ ವೇಳೆ ಸಹ ನಟನ ಬಾಯಿ ತಪ್ಪಿಂದ ಕೊರಗಜ್ಜನ ಡೈಲಾಗ್ ಬಂದಿದ್ದು ಅದಕ್ಕಾಗಿ ಕೊರಗಜ್ಜನ ಸಾನಿಧ್ಯಕ್ಕೆ ಬಂದು ತನ್ನ ನಾಯಕ ನಟನೆಯ ನೂತನ ಸಿನೆಮಾ “ಕಾಲಾಯ ನಮಃ”ದ ಯಶಸ್ಸಿಗೆ ಪ್ರಾರ್ಥಿಸಿರುವುದಾಗಿ ಸ್ಯಾಂಡಲ್ ವುಡ್ ನಟ ಮಿಸ್ಟರ್ ಗರಗಸ ಖ್ಯಾತಿಯ ಕೋಮಲ್ ಹೇಳಿದ್ದಾರೆ.

ನಟ ಕೋಮಲ್ ಇಂದು ಪತ್ನಿ ಅನುಸೂಯ ಜೊತೆ ಮಂಗಳೂರು ಹೊರವಲಯದ ಕಲ್ಲಾಪು, ಬುರ್ದುಗೋಳಿ ಗುಳಿಗ, ಕೊರಗತನಿಯ ಉದ್ಭವ ಶಿಲೆಯ ಆದಿ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.”ಕಾಲಾಯ ನಮಃ” ಸಿನೆಮಾ ಶೂಟಿಂಗ್ ಸನ್ನಿವೇಶವೊಂದರಲ್ಲಿ ಸಹನಟ ಶೈನ್ ಶೆಟ್ಟಿಯವರು ಹೇಯ್ ನಿನಗೆ ಒಳ್ಳೆದಾಯ್ತು ಮಾರಾಯ.. ಕೊರಗಜ್ಜನಿಗೆ ಚಕ್ಕುಳಿ, ವೀಳ್ಯ ಇಟ್ಟು ಪ್ರಸಾದ ತಗೊಳ್ಳಬೇಕೆಂದು ಬಾಯಿ ತಪ್ಪಿ ಡೈಲಾಗ್ ಹೇಳಿದ್ದರು. ಶೂಟಿಂಗ್ ಬ್ರೇಕ್ ವೇಳೆ ಶೈನ್ ಶೆಟ್ಟಿ ಅವರಲ್ಲಿ ವಿಚಾರಿಸಿದಾಗ ಕೊರಗಜ್ಜ ದೈವದ ಕಾರಣಿಕದ ಬಗ್ಗೆ ನನಗೆ ವಿವರಿಸಿದ್ದಾರೆ. ಹಾಗಾಗಿ ಸಿನೆಮಾ ಬಿಡುಗಡೆಗೂ ಮುನ್ನ ಕೊರಗಜ್ಜನಲ್ಲಿಗೆ ಬಂದು ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿರೋದಾಗಿ ಕೋಮಲ್ ಹೇಳಿದರು.

ಈಗಾಗಲೇ ನಮೋ ಭೂತಾತ್ಮ 2 ಮತ್ತು ಉಂಡೇನಾಮ ಸಿನೆಮಾಗಳು ರಿಲೀಸ್ ಆಗಿ ಯಶಸ್ಸು ಗಳಿಸಿದೆ. ಮುಂದೆ ನನ್ನ ನಟನೆಯ ರೊಲ್ಯಾಕ್ಸ್ , ಹುಕುಂ, ವಜ್ರಮುನಿ, ಕೋಣ ಮೊದಲಾದ ಸಿನೆಮಾಗಳು ಚಿತ್ರೀಕರಣಗೊಳ್ಳುತ್ತಿದ್ದು ಶೀಘ್ರದಲ್ಲೇ ಬಿಡುಗಡೆಗೊಳ್ಳಲಿವೆ ಎಂದರು.

ಕೋಮಲ್ ಆಪ್ತರಾದ ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕ ಬಾಲಕೃಷ್ಣ, ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ನಾಯ್ಕ್, ಗೌರವ ಸಲಹೆಗಾರರಾದ ಚಂದ್ರಹಾಸ್ ಪಂಡಿತ್ ಹೌಸ್, ಗೌರವ ಅಧ್ಯಕ್ಷರಾದ ಸಂಜೀವ ಭಂಡಾರಿ, ಪ್ರಮುಖರಾದ ದೇವದಾಸ್ ಕಾಯಂಗಲ, ಕಮಲಾಕ್ಷ ವಿ ಕುಲಾಲ್, ನವೀನ್ ಕಾಯಂಗಳ, ಪ್ರಶಾಂತ್ ಕಾಯಂಗಳ, ಪುರುಷೋತ್ತಮ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *