ಚಲನಚಿತ್ರಗಳ ಬಗ್ಗೆ ನೆಗೆಟಿವ್‌ ರಿವ್ಯೂ ಮಾಡ್ತೀರಾ, ನಿಮಗೆ ಕಾದಿದೆ ಶಾಕ್‌

ಕೊಚ್ಚಿ: ಹೊಸ ಚಲನಚಿತ್ರಗಳು ಬಿಡುಗಡೆಯಾದಾಗ ಸಾಮಾಜಿಕ ಮಾಧ್ಯಮದಲ್ಲಿ ನಕಾರಾತ್ಮಕ ವಿಶ್ಲೇಷಣೆ ಮಾಡಿರುವ ಬಗ್ಗೆ ಎರ್ನಾಕುಲಂ ಸೆಂಟ್ರಲ್‌ ಪೊಲೀಸರು ಬುಧವಾರ ಮೊದಲ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ಸೂಕ್ಷವಾಗಿ ಗಮನಿಸುವಂತೆ ಕೇರಳ ಹೈಕೋರ್ಟ್‌ ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ಸೂಚನೆ ನೀಡಿದ ಎರಡು ವಾರಗಳ ನಂತರ ಪ್ರಕರಣ ದಾಖಲಿಸಿದ್ದು, ಫೇಸ್‌ ಬುಕ್‌, ಯೂಟ್ಯೂಬ್‌ ಸೇರಿದಂತೆ ಒಂಬತ್ತು ಸಂಸ್ಥೆಗಳ ಮೇಲೆ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಅವರ ಮಲಯಾಳಂ ಚಿತ್ರ “ರಾಹೇಲ್ ಮಕನ್ ಕೋರಾ” ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಕಾರಾತ್ಮಕ ವಿಮರ್ಶೆಗಳು ಹರಿದಾಡುತ್ತಿರುವುದನ್ನು ಕಂಡು ಚಲನಚಿತ್ರ ನಿರ್ದೇಶಕ ಉಬೈನಿ ಇಬ್ರಾಹಿಂ ನೀಡಿದ ದೂರಿನ ಆಧಾರದ ಮೇಲೆ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, “ಆರೋಮಲಿಂಟೆ ಅದ್ಯಾತೆ ಪ್ರಣಾಯಂ” ಚಿತ್ರದ ನಿರ್ದೇಶಕ ಮುಬೀನ್ ರೌಫ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ನಡೆಸಿದೆ. ವ್ಲಾಗರ್‌ಗಳ ನಕಾರಾತ್ಮಕ ಪ್ರಚಾರದಿಂದ ತಮ್ಮ ಚಿತ್ರಕ್ಕೆ ನಷ್ಟವಾಗಿದೆ ಈ ನಿಟ್ಟಿನಲ್ಲಿ ಕೋರ್ಟ್‌ ನ್ಯಾಯ ಕೊಡಿಸಬೇಕು ಎಂದು ಅವರು ಕೋರಿದ್ದರು.

Font Awesome Icons

Leave a Reply

Your email address will not be published. Required fields are marked *