ಚೆನ್ನೈ: ಖ್ಯಾತ ನಟ ಜೂನಿಯರ್ ಬಾಲಯ್ಯ(70) ಚೆನ್ನೈನ ವಲಸರವಕ್ಕಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಜೂನಿಯರ್ ಬಾಲಯ್ಯ ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದ್ದಾರೆ. 1975ರಲ್ಲಿ ತೆರೆಕಂಡ ‘ಮೆಲ್ನಟ್ಟು ಮರುಮಾಲ್’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಖ್ಯಾತ ನಟ ಡಿ.ಎಸ್.ಬಾಲಯ್ಯ ಅವರ ಪುತ್ರ ಜೂನಿಯರ್ ಬಾಲಯ್ಯ.
ಕರಗತ ಕಾರನ್, ವಿನ್ನರ್, ಗೋಪುರ ವಾಸಲೀಲೆ, ಸುಂದರ ಕಾಂಡಂ, ಸಾತ್ಟೈ, ನೆರ್ಕೊಂಡ ಪಾರ್ವೈ ಮುಂತಾದ ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ದೊಡ್ಡ ಪರದೆಯ ಹೊರತಾಗಿ, ಜೂನಿಯರ್ ಬಾಲಯ್ಯ ಅವರು ಸಿದ್ಧಿ, ಚಿನ್ನ ಪಾಪ ಪೆರಿಯಾ ಪಾಪಾ ಸೇರಿದಂತೆ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಇನ್ನು ಜೂನಿಯರ್ ಬಾಲಯ್ಯ ಅವರ ನಿಧನಕ್ಕೆ ಚಿತ್ರೋದ್ಯಮ ಕಂಬನಿ ಮಿಡಿದೆದೆ.