ಚಂದನವನದ ಚಿರಯೌವ್ವನ ನಟ ಎಂದರೆ ನಟ ರಮೇಶ್ ಅರವಿಂದ್. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ನಟ ರಮೇಶ್ ಇಂದಿಗೂ ಕೂಡ ಬೇಡಿಕೆಯ ನಟ. ರಮೇಶ್ ಇಂದು ಹುಟ್ಟುಹಬ್ಬ ಸಂಭ್ರಮದಲ್ಲಿದ್ದು, ಅವರಿಗೆ ಅಭಿನಂದನಗಳ ಮಹಾಪೂರ ಹರಿದು ಬಂದಿದೆ.
ಕೆ ಬಾಲಚಂದರ್ ನಿರ್ದೇಶನದ ಸುಂದರ ಸ್ವಪ್ನಗಳು ಚಿತ್ರದ ಮೂಲಕ ರಮೇಶ್ ಅರವಿಂದ್ ಸ್ಯಾಂಡಲ್ವುಡ್ನಲ್ಲಿ ಮಿಂಚಲು ಶುರುಮಾಡಿದರು. ಕೇವಲ ನಟನೆ ಮಾತ್ರವಲ್ಲದೇ ರಾಮ ಶಾಮ ಭಾಮದಂತಹ ಅನೇಕ ಚಿತ್ರಗಳನ್ನು ನಿರ್ದೇಶಿಸಿ, ನಿರ್ದೇಶಕ ಪಟ್ಟವನ್ನು ರಮೇಶ್ ಗಳಿಸಿದರು. ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ತಮ್ಮ ಛಾಪು ಮೂಡಿಸಿದವರು ರಮೇಶ್.
ಅತ್ಯಂತ ಚತುರ, ವಾಕ್ಚತುರ್ಯ ಹೊಂದಿರಿವ ರಮೇಶ್ ಮಾತಿಗೆ ಸೋಲಿಲ್ಲದವರಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಮಿಂಚಿದ್ದಾರೆ ಇವರು. ಸದಾ ಹಸನ್ಮುಖಿ ಗುಣದಿಂದಲೇ ಎದುರಿರುವವರನ್ನು ಸೋಲಿಸಬಲ್ಲ ನಟ ರಮೇಶ್ ಎಂದರೆ ತಪ್ಪಲ್ಲ. ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನಡೆಸಿ ಮನೆ ಮಾತಗಿದ್ದಾರೆ.
ಇನ್ನು ಸೆಲೆಬ್ರಿಟಿಗಳ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಘೋಷಣೆ ಆಗುತ್ತವೆ. ಅದೇ ರೀತಿ ರಮೇಶ್ ಅರವಿಂದ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರಕ್ಕೆ ‘ದೈಜಿ’ ಎಂದು ಶೀರ್ಷಿಕೆ ಇಡಲಾಗಿದೆ. ಇದು ರಮೇಶ್ ಅವರ 106ನೇ ಸಿನಿಮಾ. ‘ದೈಜಿ ಸಿನಿಮಾ ಹಾರರ್, ಮಿಸ್ಟರಿ ಶೈಲಿಯಲ್ಲಿ ಮೂಡಿ ಬರುತ್ತಿದೆ. ಈ ವರ್ಷ ಡಿಸೆಂಬರ್ ಅಥವಾ 2024ರ ಜನವರಿ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ಇದರ ಕಥೆ ಅಮೆರಿಕದಲ್ಲೇ ಸಾಗಲಿದೆ.