ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಶಾಸಕ ಜಿ.ಟಿ ದೇವೇಗೌಡ ಔಟ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





ಬೆಂಗಳೂರು,ಅಕ್ಟೋಬರ್, 30,2024 (www.justkannada.in): ರಾಜ್ಯದಲ್ಲಿ  ಮೂರು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು ಆ ಪಟ್ಟಿಯಲ್ಲಿ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡರನ್ನು ಕೈಬಿಡಲಾಗಿದೆ.

ಜಿಡಿಎಲ್ ಪಿ ನಾಯಕ ಸ್ಥಾನ ಸಿಗದಿದ್ದಕೆ ಬೇಸರಗೊಂಡಿದ್ದ ಶಾಸಕ ಜಿ.ಟಿ. ದೇವೇಗೌಡರು ಇತ್ತೀಚೆಗೆ ದಸರಾ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಪರ  ಬ್ಯಾಟ್ ಬೀಸಿದ್ದರು.

ದಸರಾ ಮಹೋತ್ಸವದಲ್ಲಿ ಮಾತನಾಡಿದ ಜಿ.ಟಿ. ದೇವೇಗೌಡ, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ. ಎಫ್ ಐಆರ್ ಆದ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾ?. ಹೆಚ್ ಡಿ ಕುಮಾರಸ್ವಾಮಿ ಮೇಲೆ ಎಫ್ ಐಆರ್ ಆಗಿಲ್ವಾ? ಅವರು ರಾಜೀನಾಮೆ ಕೊಡ್ತಾರಾ ಎಂದು ಹೇಳಿಕೆ ನೀಡಿದ್ದರು. ಇದೀಗ ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಿಂದಲೇ ಔಟ್ ಆಗಿದ್ದಾರೆ.

Key words: MLA, GT Deve Gowda, list, JDS star campaigners






Previous articleಮೈಸೂರು ಅರಮನೆ ಮಂಡಳಿ, ಮೈಸೂರು


Font Awesome Icons

Leave a Reply

Your email address will not be published. Required fields are marked *