ಮಂಗಳೂರು: ಉತ್ತಮ ರಿಯಾಲಿಟಿ ಶೋಗಳ ಮೂಲಕ ಜನರನ್ನು ಮನರಂಜಿಸುತ್ತಿರುವ ಜೀ ಕನ್ನಡ ವಾಹಿನಿಯಲ್ಲಿ ಇದೀಗ ಸರಿಗಮಪ ಸೀಸನ್ 20 ಆರಂಭವಾಗುತ್ತಿದೆ.
ಇಷ್ಟು ದಿನ ರಾಜ್ಯಾದ್ಯಂತ ಸುತ್ತಿ ಪ್ರತಿಭೆಗಳನ್ನು ಹುಡಕಿ ಹಾಡುವವರಿಗೆ ಅವಕಾಶ ಕೊಡ್ತಾ ಇದ್ರು. ಈ ಬಾರಿ ವಿಶ್ವ ಕನ್ನಡಿಗರಿಗಾಗಿ ಸರಿಗಪಮ ಶೋ ನಡೆಸಿದ್ದಾರೆ. ವಿಶ್ವದಾದ್ಯಂತ ನಡೆಸಿದ ಆಡಿಷನ್ಗಳಲ್ಲಿ ಸುಮಾರು 1 ಲಕ್ಷ ಹಾಡುಗಾರರು ಭಾಗವಹಿಸಿದ್ದರು. ಈ ಪೈಕಿ ಟಾಪ್ 20 ಸಂಗೀತ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿತ್ತು. ಮೆಗಾ ಆಡಿಷನ್ನಲ್ಲಿ ಜೀ ಕನ್ನಡದ ವೇದಿಕೆ ಹತ್ತಿ, ತಮ್ಮ ಅದ್ಭುತ ಗಾಯನದ ಮೂಲಕ ಕರಾವಳಿಯ ಬಹುಮುಖ ಪ್ರತಿಭೆ ಸಮನ್ವಿ ರೈ ಪುತ್ತೂರು ಇವರು ತೀರ್ಪುಗಾರರಿಂದ ಮೆಚ್ಚುಗೆ ಪಡೆದು ಆಯ್ಕೆಯಾಗಿದ್ದಾರೆ.
ಈ ಮೂಲಕ ಪುತ್ತೂರಿನ ಕೀರ್ತಿಯನ್ನು ಗಾಯನದ ಮೂಲಕ ವಿಶ್ವಕ್ಕೆ ಪರಿಚಯಿಸಲಿದ್ದಾರೆ. ಇದೀಗ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಸಮನ್ವಿ ರೈಯವರು ಖ್ಯಾತ ಸಂಗೀತ ಗಾಯಕ ಆರ್ಯಭಟ ಪ್ರಶಸ್ತಿ ವಿಜೇತ ಜಗದೀಶ್ ಆಚಾರ್ಯರವರ ಸಂಗೀತ ತಂಡದಲ್ಲಿ ಸುಮಾರು 5 ವರ್ಷಗಳಿಂದ ಅದ್ಭುತ ಗಾಯಕಿಯಾಗಿ ಜನಮನ್ನಣೆ ಗಳಿಸಿದ್ದಾರೆ.
ಈಕೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಅರುಣ್ ಪ್ರಕಾಶ್ ರೈ ಮದಕ ಮತ್ತು ಸವಿತಾ ಎ. ರೈ ದಂಪತಿಯ ಪುತ್ರಿಯಾಗಿದ್ದಾರೆ.