ಮುಂಬೈ: ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಒಂದಲ್ಲಾ ಒಂದು ವಿಷಯಕ್ಕೆ ಸಾಮಾಜಿಕ ಜಾಲತಾಣಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇನ್ನು ಕಳೆದ ಕೆಲವು ವರ್ಷಗಳಿಂದ ನಟ ವಿಜಯ ದೇವರಕೊಂಡ ಹಾಗೂ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಬಹಳ ಆತ್ಮೀಯರಾಗಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.
ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಇವರು ಜೊತೆಯಾಗಿ ವಿದೇಶದಲ್ಲಿ ತಿರುಗಾಡಿದ್ದಾರೆ ಎಂಬ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವುದು ಹೊಸತೇನಲ್ಲ. ದೀಪಾವಳಿ ಹಬ್ಬವನ್ನು ರಶ್ಮಿಕಾ ದೇವರಕೊಂಡ ಜೊತೆ ಆಚರಿಸಿಕೊಂಡಿದ್ದರು.
ಆದರೆ ಇದೀಗ ಡೇಟಿಂಗ್ ಮೀಟಿಂಗ್ ನಡುವೆ ಇನ್ನೊಂದು ವಿಚಾರ ಸಖತ್ ವೈರಲ್ ಆಗುತ್ತಿದೆ. ಅದುವೆ ನಟ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಅವರ ನಿಶ್ಚಿತಾರ್ಥ. ಮುಂದಿನ ತಿಂಗಳು ಅಂದರೆ ಫೆಬ್ರವರಿ 2ನೇ ವಾರದಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ರಶ್ಮಿಕಾ ಮಂದಣ್ಣ ಅಥವಾ ವಿಜಯ ದೇವರಕೊಂಡ ಕಡೆಯಿಂದ ಅಧಿಕೃತವಾಗಿ ಯಾವ ಮಾಹಿತಿಯೂ ಹೊರಬಿದ್ದಿಲ್ಲ.