ತೇಜಸ್‌ ಸಿನಿಮಾ ನೋಡಿ ಕಣ್ಣೀರು ಹಾಕಿದ ಯೋಗಿ ಆದಿತ್ಯನಾಥ್‌

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ತೇಜಸ್‌ ಸಿನಿಮಾ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್​ ಮಾಡಿಲ್ಲ. ಈಗ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ‘ತೇಜಸ್​’ ಸಿನಿಮಾ ತೋರಿಸುವ ಮೂಲಕ ವೀಕ್ಷಕರ ಮನಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.

ಯೋಗಿ ಆದಿತ್ಯನಾಥ್‌ ಸಿನಿಮಾ ವೀಕ್ಷಿಸಿದ ಕ್ಷಣಗಳನ್ನು ಕಂಗನಾ ರಣಾವತ್​ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾಗೆ ಬೆಂಬಲ ಸೂಚಿಸಿದ ಯೋಗಿಗೆ ಕಂಗನಾ ಧನ್ಯವಾದ ತಿಳಿಸಿದ್ದಾರೆ. ಈ ಸಿನಿಮಾ ನೋಡುವಾಗ ಯೋಗಿ ಭಾವುಕರಾಗಿ ಕಣ್ಣೀರು ಹಾಕಿದರು ಎಂದು ಕೂಡ ಕಂಗನಾ ಬರೆದುಕೊಂಡಿದ್ದಾರೆ.

ಇಂದು ಯೋಗಿ ಆದಿತ್ಯನಾಥ್​ ಅವರಿಗೆ ಸೈನಿಕರ ಜೀವನಾಧಾರಿತ ‘ತೇಜಸ್​’ ಸಿನಿಮಾ ತೋರಿಸಲಾಯಿತು. ತೇಜಸ್​ ಸಿನಿಮಾದ ಕೊನೇ ಸಂಭಾಷಣೆಗಳನ್ನು ಕೇಳಿಸಿಕೊಂಡು ಯೋಗಿ ಅವರಿಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ’ ಎಂದು ಕಂಗನಾ ಅವರು ಪೋಸ್ಟ್ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

Font Awesome Icons

Leave a Reply

Your email address will not be published. Required fields are marked *