ಮುಂಬಯಿ: ಆಮಿರ್ ಖಾನ್ ಅಭಿನಯದ ʼಥ್ರೀ ಈಡಿಯಟ್ಸ್ʼ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದ ನಟ ಅಖಿಲ್ ಮಿಶ್ರಾ(58) ಇಂದು (ಸೆ.21) ನಿಧನರಾಗಿದ್ದಾರೆ.
ನಟ ತನ್ನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ವೇಳೆ ಅವರ ಪತ್ನಿ ಸುಝೇನ್ ಬರ್ನರ್ಟ್ ಹೈದರಾಬಾದ್ ನಲ್ಲಿ ಶೂಟಿಂಗ್ ಕೆಲಸಕ್ಕೆಂದು ಹೋಗಿದ್ದರು. ಮಾಹಿತಿ ತಿಳಿದ ಕೂಡಲೇ ಅವರು ವಾಪಾಸ್ ಬಂದಿದ್ದಾರೆ. “ನನ್ನ ಗಂಡನಿಲ್ಲದೆ ಹೃದಯ ಒಡೆದು ಹೋಗಿದೆ” ಎಂದು ದುಃಖ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.