ನಟಿಯ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬೆತ್ತಲೆ ವಿಡಿಯೋ ಶೇರ್ ಮಾಡಿದ ನಟ

ಹಾಲಿವುಡ್ ನ ಹೆಸರಾಂತ ನಟಿ ಸಾಂಡ್ರಾ ಬುಲಕ್ ನಟನೆಯ ಜೊತೆಗೆ ಬೋಲ್ಡ್ ಅಭಿನಯದ ಮೂಲಕ ಹೆಸರಾದವರು. ಇಂತಹ ನಟಿಯು ಮೊನ್ನೆಯಷ್ಟೇ ತಮ್ಮ 59ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟಹಬ್ಬಕ್ಕೆ ಸಹನಟ ರಯಾನ್ ರೆನಾಲ್ಡ್ಸ್ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

ರಯಾನ್ ರೆನಾಲ್ಡ್ಸ್ ಮತ್ತು ಸಾಂಡ್ರಾ ಬುಲಕ್ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅದರಲ್ಲೂ ‘ದಿ ಪ್ರಪೋಸಲ್’ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾದಲ್ಲಿನ ಇಬ್ಬರೂ ಬೆತ್ತಲೆ ಇರುವ  ದೃಶ್ಯವನ್ನು ಇನ್ಸ್ಟಾದಲ್ಲಿ ಶೇರ್ ಮಾಡುವ ಮೂಲಕ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಿದ್ದಾರೆ ರಯಾನ್ ರೆನಾಲ್ಡ್ಸ್.

‘ನನ್ನ ನೆಚ್ಚಿನ ನಟಿ, ಅಪ್ರತಿಮ ಕಲಾವಿದೆ ಮತ್ತು ಅದ್ಭುತ ಪ್ರತಿಭೆ ಇರುವ ಸಾಂಡ್ರಾಗೆ ಹುಟ್ಟು ಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. 59ರ ವಯಸ್ಸಿನ ನಟಿಗೆ ಇಂಥದ್ದೊಂದು ವಿಡಿಯೋ ಶೇರ್ ಮಾಡಿ ವಿಶ್ ಮಾಡಬಹುದಾ? ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಂಡ್ರಾ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅಭಿಮಾನಿಗಳು ಮಾತ್ರ ಪರ ಮತ್ತು ವಿರೋಧದ ಕಾಮೆಂಟ್ ಹಾಕುವಲ್ಲಿ ಮುಗಿಬಿದ್ದಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *