ನಟಿ ಝರೀನಾ ಖಾನ್ ವಿರುದ್ಧ ಅರೆಸ್ಟ್ ವಾರೆಂಟ್

ಬಾಲಿವುಡ್ ನಟಿ ಝರೀನ ಖಾನ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ವಂಚನೆ ಕೇಸ್ ಜೊತೆ ಲಿಂಕ್ ಹೊಂದಿರುವ ನಿಟ್ಟಿನಲ್ಲಿ ಬಾಲಿವುಡ್​ನ ಖ್ಯಾತ ನಟಿಯ ವಿರುದ್ಧ ಕೊಲ್ಕತ್ತಾ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ಈ ಕೇಸ್ 2018ರದ್ದು. 2018ರಲ್ಲಿ ದಾಖಲಾದ ಈ ವಂಚನೆ ಕೇಸ್​ ಜೊತೆಗೆ ಬಾಲಿವುಡ್​ ನಟಿಗೆ ಲಿಂಕ್ ಇರುವುದು ಈಗ ಬಯಲಾಗಿದ್ದು ಅವರನ್ನು ಬಂಧಿಸುವಂತೆ ಕೊಲ್ಕತ್ತಾ ಕೋರ್ಟ್ ವಾರೆಂಟ್ ಜಾರಿ ಮಾಡಿದೆ.

ಈ ಕೇಸ್​ನ ತನಿಖಾ ಅಧಿಕಾರಿ ಕೊಲ್ಕತ್ತಾದ ಸೇಲ್ದಾ ಕೋರ್ಟ್​ನಲ್ಲಿ ನಟಿ ಝರೀನ ಖಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು ಇದರಿಂದ ನಟಿಗೆ ಸಂಕಷ್ಟ ಎದುರಾಗಿದೆ. ನಟಿಯ ವಿರುದ್ಧ 2018ರಲ್ಲಿಯೇ ಕೇಸ್ ದಾಖಲಾಗಿತ್ತು.

ನಟಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಈ ಬಗ್ಗೆ ತನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ನಾನ ನನ್ನ ಲಾಯರ್ ಜೊತೆ ಮಾತನಾಡುತ್ತಿದ್ದೇನೆ. ಇದನ್ನು ತಿಳಿದ ಮೇಲಷ್ಟೇ ನಾನು ಕ್ಲಾರಿಟಿ ಕೊಡಲು ಸಾಧ್ಯ ಎಂದಿದ್ದಾರೆ ನಟಿ.

 

 

Font Awesome Icons

Leave a Reply

Your email address will not be published. Required fields are marked *