ನಟಿ ವಿಜಯಲಕ್ಷ್ಮಿಗೆ ಏಳು ಬಾರಿ ಗರ್ಭಪಾತ: ನಟನಿಗೆ ಪೊಲೀಸ್ ಬುಲಾವ್​

ಚೆನ್ನೈ:  ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ವಿಜಯಲಕ್ಷ್ಮಿ ಅವರು ರಾಜಕಾರಣಿ, ನಟ, ನಿರ್ದೇಶಕ ಸೀಮನ್​ ವಿರುದ್ಧ ಏಳು ಬಾರಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪವನ್ನು ಹೊರಿಸಿದ್ದಾರೆ.

ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಇದಾಗಲೇ ನಟಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೀಮನ್​ ಅವರಿಗೆ ಹಾಜರಾಗುವಂತೆ ಪೊಲೀಸರು ನೋಟಿಸ್​ ನೀಡಿದ್ದಾರೆ. ಬರುವ ಮಂಗಳವಾರ ಹಾಜರಾಗುವಂತೆ ನಿರ್ದೇಶಿಸಲಾಗಿದೆ.

ನಾಗಮಂಗಲ, ಸ್ವಸ್ತಿಕ್, ಕನಕಾಂಬರಿ ಹಾಗೂ ಸೂರ್ಯವಂಶ ಸೇರಿದಂತೆ ಹಲವು ಹಿಟ್​ ಚಿತ್ರಗಳನ್ನು ನೀಡಿರುವ ಬಹುಭಾಷಾ ತಾರೆ ವಿಜಯಲಕ್ಷ್ಮಿ ಅವರ ಆರೋಪವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಸೀಮನ್​ ಅವರು, ನಾಮ್​ ತಮಿಳರ್​ ಕಟ್ಚಿ (ಎನ್​ಟಿಕೆ) ಪಕ್ಷದ ನಾಯಕ ಕೂಡ. ಇವರ ವಿರುದ್ಧ ಇದಾಗಲೇ ವಿಜಯಲಕ್ಷ್ಮಿ ಅವರು ಮಾಧ್ಯಮಗಳ ಎದುರೂ ನೋವು ತೋಡಿಕೊಂಡಿದ್ದರು. ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದರು. ಅವರ ಜೊತೆ ತಮಗೆ ಮದುವೆಯಾಗಿದ್ದು, ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ. 2008ರಲ್ಲಿ ಸೀಮನ್ ಹಾಗೂ ತಮಗೆ ಮದುವೆಯಾಗಿದೆ ಎಂದಿದ್ದಾರೆ ವಿಜಯಲಕ್ಷ್ಮಿ.

ಅಂದ ಹಾಗೆ, ಈ ಹಿಂದೆ ವಿಜಯಲಕ್ಷ್ಮಿ ಕುಟುಂಬಕ್ಕೆ ನಟಿ ಜಯಪ್ರದ ಸಹೋದ ನಿಂದ ಆದ ನರಕಯಾತನೆಯನ್ನು ಸಂದರ್ಶವೊಂದರಲ್ಲಿ ಎಳೆ ಎಳೆಯಾಗಿ ಬಿಟ್ಟಿದ್ದರು. ನಟಿ ವಿಜಯಲಕ್ಷ್ಮಿ ಸಹೋದರಿ ಉಷಾ ಮದುವೆ ಆಗಿರುವುದು ನಟಿ ಜಯಪ್ರದ ಸಹೋದರ ರಾಜ ಬಾಬು ರವರನ್ನ. ಸುಖವಾದ ಸಂಸಾರ ನಡೆಸಬೇಕಿದ್ದ ಉಷಾ, ರಾಜ ಬಾಬು ರವರಿಂದ ಕಿರುಕುಳಕ್ಕೊಳಗಾದರು. ನನ್ನ ಬಾವ ನಟಿ ಜಯಪ್ರದ ಅವರ ಅಣ್ಣ ರಾಜ ಬಾಬು. ಅವರಿಂದ ನನ್ನ ಕುಟುಂಬಕ್ಕೆ ಆಗಿರುವ ಅನ್ಯಾಯದ ಬಗ್ಗೆ ನಾನು ಹೇಗೆ ಹೇಳಲಿ.?” ಎನ್ನುತ್ತಲೇ ತಮ್ಮ ಬದುಕಿನಲ್ಲಿ ಎದುರಾದ ಸಂಕಷ್ಟಗಳ ಬಗ್ಗೆ ನಟಿ ವಿಜಯಲಕ್ಷ್ಮಿ ಬಾಯಿಬಿಟ್ಟರು.

ಇಲ್ಲಿಯವರೆಗೂ ನಾನು, ನನ್ನ ಅಕ್ಕ, ಅಕ್ಕನ ಮಗುವಿನ ಮುಖ ನೋಡಿಲ್ಲ.ಬಾವ ನೋಡಲು ಬಿಡುತ್ತಿಲ್ಲ. ನನ್ನ ಅಕ್ಕನಿಗೆ ಅವರು ವಿಚ್ಛೇದನ ಕೂಡ ಕೊಟ್ಟಿಲ್ಲ. ಯಾಕೆ ಇಷ್ಟೊಂದು ದ್ವೇಷ ಅನ್ನೋದೇ ನಮಗೆ ಗೊತ್ತಿಲ್ಲ. ನನ್ನ ಅಕ್ಕನ ಜೀವನ ಹಾಳಾಗಿದೆ. ಅಕ್ಕನ ಆಪರೇಶನ್ ಗೆ ನನ್ನ ಬಳಿ ದುಡ್ಡು ಇರಲಿಲ್ಲ. ನಾನು ಯಾವತ್ತೂ ತಪ್ಪು ದಾರಿ ಹಿಡಿದಿಲ್ಲ. ನಾನು ಇಲ್ಲಿಯವರೆಗೂ ಮದುವೆ ಕೂಡ ಮಾಡಿಕೊಂಡಿಲ್ಲ ಎಂದಿದ್ದರು.

ಆದರೀಗ 2008ರಲ್ಲಿ ಸೀಮನ್ ಹಾಗೂ ತಮಗೆ ಮದುವೆಯಾಗಿದೆ ಎಂದಿದ್ದಾರೆ ವಿಜಯಲಕ್ಷ್ಮಿ. ಸೀಮನ್ ತಮಗೆ ಮೋಸ ಮಾಡಿದಲ್ಲದೆ ಅವರ ಕಡೆಯವರಿಂದ ಬೆದರಿಕೆ ಹಾಕಲಾಗುತ್ತಿದೆ ಎಂದಿರುವ ನಟಿ ಕೆಲ ದಿನಗಳ ಹಿಂದೆ ಈ ಮೋಸದ ಕುರಿತು ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರ ಸಹಾಯ ಪಡೆದುಕೊಂಡು ದೂರು ದಾಖಲಿಸಿದ್ದರು.

Font Awesome Icons

Leave a Reply

Your email address will not be published. Required fields are marked *