ನನಗೆ ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ ನಟ ಯಾರು ಗೊತ್ತಾ?

Do you know who is the actor who said that he doesn't believe in any religion?
Photo Credit :
News Kannada

ನವದೆಹಲಿ: ಭಾರತದಂತಹ ಅಗಾಧ ಜನಸಂಖ್ಯೆಯ ದೇಶದಲ್ಲಿ ಸ್ಟಾರ್‌ ನಟರಿಗೆ ಅವರನ್ನು ಫಾಲೋ ಮಾಡುವ, ಅವರ ನಟನೆಯನ್ನು ಅನುಕರಿಸುವ ಅಗಾಧ ಸಂಖ್ಯೆಯ ಸಿನಿಪ್ರೇಮಿಗಳಿರುತ್ತಾರೆ. ಅದೇ ರೀತಿ ನಟ ಅಕ್ಷಯ್‌ ಕುಮಾರ್‌ ಗೆ ಕೂಡ ಅಗಾಧ ಸಂಖ್ಯೆಯ ಫಾಲೋವರ್‌ ಗಳಿದ್ದಾರೆ. ಇಂದು ಅಕ್ಷಯ್​ ಕುಮಾರ್​ ಅವರಿಗೆ ಜನ್ಮದಿನದ ಸಂಭ್ರಮ. ಸೋಶಿಯಲ್​ ಮೀಡಿಯಾದಲ್ಲಿ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಇದರ ಜೊತೆಗೆ ಧರ್ಮದ ಬಗ್ಗೆ ಅಕ್ಷಯ್​ ಕುಮಾರ್​ ಹೇಳಿದ್ದ ಒಂದು ಮಾತನ್ನು ನೆನಪಿಸಿಕೊಳ್ಳಲಾಗಿದೆ. ಈ ಕುರಿತು ಚರ್ಚೆ ಆಗುತ್ತಿದೆ.
2021ರಲ್ಲಿ ಅಕ್ಷಯ್​ ಕುಮಾರ್​ ನಟನೆಯ ‘ಸೂರ್ಯವಂಶಿ’ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದ ಪ್ರಚಾರದ ವೇಳೆ ಅವರಿಗೆ ಧರ್ಮದ ಬಗ್ಗೆ ಪ್ರಶ್ನೆ ಎದುರಾಗಿತ್ತು. ‘ಈ ಸಿನಿಮಾ ಯಾವುದೇ ನಿರ್ದಿಷ್ಟ ಧರ್ಮದ ಬಗ್ಗೆ ತಾರತಮ್ಯ ಮಾಡುವ ರೀತಿಯಲ್ಲಿ ಇದೆಯಾ’ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ್ದ ಅಕ್ಷಯ್​ ಕುಮಾರ್​ ಅವರು ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದರು. ಆಗ ಅವರು ನೀಡಿದ್ದ ಹೇಳಿಕೆಯನ್ನು ಅಭಿಮಾನಿಗಳು ಬೇರೆ ಬೇರೆ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ.
ನನಗೆ ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲ. ಭಾರತೀಯನಾಗಿ ಇರುವುದರಲ್ಲಿ ಮಾತ್ರ ನನ್ನ ನಂಬಿಕೆ. ಸಿನಿಮಾದಲ್ಲೂ ಅದನ್ನೇ ತೋರಿಸುತ್ತೇವೆ. ಧರ್ಮದ ಆಧಾರದಲ್ಲಿ ನಾವು ಏನನ್ನೂ ನೋಡಿಲ್ಲ. ಭಾರತೀಯ ಎಂಬ ಪರಿಕಲ್ಪನೆ ಈ ಸಿನಿಮಾದಲ್ಲಿ ಇದೆಯೇ ಹೊರತು ಹಿಂದೂ, ಮುಸ್ಲಿಂ, ಪಾರ್ಸಿ ಎಂಬುದಲ್ಲ’ ಎಂದು ಅಕ್ಷಯ್​ ಕುಮಾರ್​ ಅವರು ಹೇಳಿದ್ದರು. ಸಿನಿಮಾದಲ್ಲಿ ಯಾವುದೇ ಒಂದು ಧರ್ಮದ ವ್ಯಕ್ತಿಯನ್ನು ವಿಲನ್​ ರೀತಿ ತೋರಿಸಿರುವುದು ಪ್ರಜ್ಞಾಪೂರ್ವಕ ನಿರ್ಧಾರ ಅಲ್ಲ ಎಂದು ಅವರು ತಿಳಿಸಿದ್ದರು.
ನಾವು ನೆಗೆಟಿವ್​ ಮತ್ತು ಪಾಸಿಟಿವ್​ ಪಾತ್ರಗಳನ್ನು ಹೊಂದಿರುವ ಸಿನಿಮಾವನ್ನು ಮಾಡುತ್ತೇವೆ. ನಾನು ಒಂದು ಪಾತ್ರ ಮಾಡುತ್ತಿರುತ್ತೇನೆ ಅಷ್ಟೇ. ಎಲ್ಲ ಸಿನಿಮಾದಲ್ಲಿ ಒಳ್ಳೆಯ ಮತ್ತು ಕೆಟ್ಟ ಪಾತ್ರಗಳು ಇರುತ್ತವೆ. ಯಾವುದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ತಿಳಿವಳಿಕೆ ಪ್ರೇಕ್ಷಕರಿಗೆ ಇದೆ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದರು.

ಹನಿ ಹನಿ ಕೂಡಿ ಹಳ್ಳ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

This site is protected by reCAPTCHA and the Google
Privacy Policy and
Terms of Service apply.

12792

Font Awesome Icons

Leave a Reply

Your email address will not be published. Required fields are marked *