ಬಾಕ್ಸ್ ಆಫೀಸಿನಲ್ಲಿ ಭಾರೀ ಕಮಾಲ್ ಮಾಡುತ್ತಿರುವ ಜವಾನ್ ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲೇ ಥಿಯೇಟರ್ ನಲ್ಲಿ ಶೂಟ್ ಮಾಡಲಾದ ಜವಾನ್ ಸಿನಿಮಾವನ್ನು ಕಿಡಿಗೇಡಿಗಳು ರಿಲೀಸ್ ಮಾಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲೂ ಶೇರ್ ಆಗಿದೆ.
ಈ ಲಿಂಕ್ ಅನ್ನು ಹಂಚಿಕೊಳ್ಳುವವರ ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ ಶಾರುಖ್ ಖಾನ್. ಸ್ವತಃ ಶಾರುಖ್ ಖಾನ್ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇವರ ಪತ್ನಿ ಗೌರಿ ಖಾನ್ ಇದರ ನಿರ್ಮಾಪಕರು. ಹಾಗಾಗಿ ಪೈರಸಿ ಮಾಡುವವರ ವಿರುದ‍್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತಾಗಿ ಈಗಾಗಲೇ ಅವರು ಮುಂಬೈನ ಸಾಂತಾಕ್ರೂಜ್ ವೆಸ್ಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೊತೆಗೆ ಪೈರಸಿ ಪತ್ತೆ ಹಚ್ಚುವಂತಹ ಏಜೆನ್ಸಿಗಳನ್ನೂ ಅವರು ನೇಮಿಸಿಕೊಂಡಿದ್ದಾರೆ.
ಇನ್ನು ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಅಬ್ಬರಿಸುತ್ತಿದೆ. ಪ್ರತಿ ದಿನವೂ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತ ಮುನ್ನುಗ್ಗುತ್ತಿದೆ. ‘ಜವಾನ್’ ತೆರೆಕಂಡು ಒಂದು ವಾರ ಕಳೆದಿದೆ. 7 ದಿನದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಈ ಸಿನಿಮಾಗೆ ಬರೋಬ್ಬರಿ 386 ಕೋಟಿ ರೂಪಾಯಿ ಗಳಿಕೆ ಆಗಿದೆ. ಇದರಿಂದ ಶಾರುಖ್ ಖಾನ್ ಮುಖದಲ್ಲಿ ನಗು ಮೂಡಿದೆ.