ಫೋಟೋವೈರಲ್: ಹಿಂದೂ ಯುವಕನ ಜೊತೆ ನಟಿ ಉರ್ಫಿ ಜಾವೇದ್ ಎಂಗೇಜ್‌

ಮುಂಬೈ: ಬಿ ಟೌನ್​ ಅಂಗಳದಲ್ಲಿ ತನ್ನ ಚಿತ್ರ-ವಿಚಿತ್ರ ಬಟ್ಟೆಗಳಿಂದ ಹೆಚ್ಚು ಸದ್ದು ಮಾಡಿರುವ ಬಿಗ್​ ಬಾಸ್​ ಓಟಿಟಿ ಮಾಜಿ ಸ್ಫರ್ಧಿ, ನಟಿ ಉರ್ಫಿ ಜಾವೇದ್​ ಒಂದಿಲ್ಲೊಂದು ವಿಚಾರಕ್ಕೆ ಆಗಿಂದಾಗೆ ಜನರ ಗಮನವನ್ನು ಸೆಳೆಯುತ್ತಿರುತ್ತಾರೆ.

ಇದೀಗ ಹೊಸ ವಿಚಾರದಲ್ಲಿ ನಟಿ ಸದ್ದಿಲ್ಲದೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಿ-ಟೌನ್ ಅಂಗಳದಲ್ಲಿ ವ್ಯಾಪಕವಾಗಿ ಹರಿದಾಡಲು ಶುರುವಾಗಿದೆ. ವೈರಲ್​ ಆಗಿರುವ ಫೋಟೋದಲ್ಲಿ ಉರ್ಫಿ ಜಾವೇದ್​ ವ್ಯಕ್ತಿಯೊಬ್ಬರ ಜೊತೆ ಪೂಜೆಗೆ ಕುಳಿತುಕೊಂಡಿರುವುದು ಕಂಡು ಬರುತ್ತದೆ. ಈ ಫೋಟೋಗಳನ್ನು ಅವರ ಸಹೋದರಿ ಉರುಸಾ ಜಾವೇದ್​ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಹಿಂದೂ ಹುಡುಗನ ಜೊತೆ ಎಂಗೇಜ್ ಆಗಿರುವಂತೆ ಕಾಣುವ ಫೋಟೋವೊಂದು ವೈರಲ್ ಆಗಿದ್ದು, ಹುಡುಗನ ಕೈಗೆ ಉಂಗುರ ತೊಡಿಸುವಂತೆ ಪೋಸ್ ನೀಡಿದ್ದಾರೆ. ಆದರೆ ಈ ಕುರಿತು ಉರ್ಫಿ ಹಾಗೂ ಆಕೆಯ ಕುಟುಂಬಸ್ಥರು ಈವರೆಗೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

Font Awesome Icons

Leave a Reply

Your email address will not be published. Required fields are marked *