ಫ್ರೆಂಡ್ಸ್ ಖ್ಯಾತಿಯ ನಟ ʼಮ್ಯಾಥ್ಯೂ ಪೆರ್ರಿ’ ಶವವಾಗಿ ಪತ್ತೆ

ಲಾಸ್ ಏಂಜಲೀಸ್: ಅಮೆರಿಕದ ಜನಪ್ರಿಯ ಟೆಲಿವಿಷನ್​ ಸೀರಿಸ್​ ‘ಫ್ರೆಂಡ್ಸ್​’ ಮೂಲಕ ಭಾರಿ ಪ್ರಸಿದ್ಧಿ ಪಡೆದಿದ್ದ ನಟ ಮ್ಯಾಥ್ಯು ಪೆರ್ರಿ ಅವರು ನಿಧನರಾಗಿದ್ದಾರೆ. ಶನಿವಾರ (ಅಕ್ಟೋಬರ್​ 28) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಹಾಟ್​ ಟಬ್​ನಲ್ಲಿ ಅವರ ಮೃತದೇಹ ಪತ್ತೆ ಆಗಿದೆ. ಮ್ಯಾಥ್ಯು ಪೆರ್ರಿ ಅವರಿಗೆ 54 ವರ್ಷ ವಯಸ್ಸಾಗಿತ್ತು. ಅನಾಮಧೇಯ ವ್ಯಕ್ತಿಯಿಂದ ಕರೆ ಬಂದ ಬಳಿಕ ಪೊಲೀಸ್ ಅಧಿಕಾರಿಗಳು ಸಂಜೆ 4 ಗಂಟೆ ಸುಮಾರಿಗೆ‌ ಮ್ಯಾಥ್ಯೂ ಪೆರ್ರಿ ಅವರ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಮನೆಯಲ್ಲಿ ನಟ ಮ್ಯಾಥೋ ಪರ್ರಿ ಹಾಟ್ ಟಬ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ.

ಅವರ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ನಟನ ಸಾವಿನ ಬಗ್ಗೆ ಕೆಲವು ಅನುಮಾನಗಳು ಮೂಡಿವೆ. ಈ ಬಗ್ಗೆ ತನಿಖೆಯ ಬಳಿಕ ಸ್ಪಷ್ಟ ಚಿತ್ರಣ ಸಿಗಬೇಕಿದೆ. ಕಿರುತೆರೆ ಮಾತ್ರವಲ್ಲದೇ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ‘ಫೂಲ್ಸ್​ ರಶ್​ ಇನ್​’, ‘ದಿ ಹೋಲ್​ ನೈನ್​ ಯಾರ್ಡ್ಸ್​’ ಸೇರಿದಂತೆ ಒಂದಷ್ಟು ಹಾಲಿವುಡ್​ ಸಿನಿಮಾಗಳಲ್ಲಿ ಮ್ಯಾಥ್ಯು ಪೆರ್ರಿ ಅವರು ಅಭಿನಯಿಸಿ ಫೇಮಸ್​ ಆಗಿದ್ದರು. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದರು.

Font Awesome Icons

Leave a Reply

Your email address will not be published. Required fields are marked *