ನವದೆಹಲಿ: ದಿಲ್ ಚಾಹ್ತಾ ಹೈ, ಚಕ್ ದೇ ಇಂಡಿಯಾ, ಮರ್ದಾನಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ರಿಯೋ ಕಪಾಡಿಯಾ (66) ನಿಧನರಾಗಿದ್ದಾರೆ.
ಅವರ ಸಾವಿನ ಸುದ್ದಿಯನ್ನು ಅವರ ಸ್ನೇಹಿತ ಫೈಸಲ್ ಮಲಿಕ್ ದೃಢಪಡಿಸಿದ್ದಾರೆ. ರಿಯೋ ಅವರ ಅಂತಿಮ ವಿಧಿಗಳು ಸೆಪ್ಟೆಂಬರ್ 15, 2023ರಂದು ಗೋರೆಗಾಂವ್ನ ಶಿವ ಧಾಮ್ ಶಂಶಾನ್ ಭೂಮಿಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ರಿಯೊ ‘ಖುದಾ ಹಾಫಿಜ್’, ‘ದಿ ಬಿಗ್ ಬುಲ್’, ‘ಏಜೆಂಟ್ ವಿನೋದ್’ ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಇತ್ತೀಚೆಗೆ ‘ಮೇಡ್ ಇನ್ ಹೆವನ್ 2’ ಎಪಿಸೋಡ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಚಲನಚಿತ್ರಗಳ ಹೊರತಾಗಿ ಇವರು ದೂರದರ್ಶನದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದರು. ‘ಸಪ್ನೆ ಸುಹಾನೆ ಲಡಕ್ಪನ್ ಕೆ’ ಮತ್ತು ‘ಸಿದ್ಧಾರ್ಥ್ ತಿವಾರಿ ಅವರ ‘ಮಹಾಭಾರತ’ದಲ್ಲಿ ನಟಿಸಿದ್ದಾರೆ.