ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಕನ್ನಡ ಸೀಸನ್ 10 ಗೆ ಎಂಟ್ರಿ ಕೊಟ್ಟಿದ್ದಾರೆ. ನಾವೆಲ್ಲ ಕಾಂಪೀಟ್ ಮಾಡ್ತಾ ಇರೋದು ಒಬ್ಬ ಶಾಸಕರ ಜತೆʼ ಎಂದು ಸ್ಪರ್ಧಿಗಳು ಸಖತ್ ಖುಷಿಯಾಗಿದ್ದಾರೆ. ಇದೀಗ ಈ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಬಾರಿ 11 ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಉಳಿದವರನ್ನು ಮುಂದಿನ ವಾರ ಆಯ್ಕೆ ಮಾಡಲಾಗುವುದು ಎಂದು ನಿರೂಪಕ ಕಿಚ್ಚ ಸುದೀಪ್ ತಿಳಿಸಿದರು. ಆದರೀಗ ಮೊದಲ ದಿನವೇ ಇದ್ದಕ್ಕಿದ್ದಂತೆ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟಿದ್ದಾರೆ. ಎಂಟ್ರಿ ವೇಳೆಯೇ ಖಡಕ್ ಡೈಲಾಗ್ ಕೂಡ ಕೂಡ ಹೇಳಿದ್ದಾರೆ.
ನಾನು ನಿನ್ನೆಯೇ ಬಿಗ್ ಬಾಸ್ ವೇದಿಕೆಗೆ ಬರಬೇಕಿತ್ತು. ಸ್ಪರ್ಧಿಯಾಗಿ ಇಲ್ಲಿ ಸೇರಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಗೆಲ್ಲೋದರಲ್ಲಿ ನಮಗೆ ಕಾಂಪ್ರಮೈಸ್ ಇಲ್ಲ ಎಂದು ಸ್ಪರ್ಧಿಗಳ ಮುಂದೆ ಹೇಳಿದ್ದಾರೆ. ಪ್ರದೀಪ್ ಈಶ್ವರ್ ಎಂಟ್ರಿಗೆ ಅನೇಕರು ತಕರಾರು ತೆಗೆದಿದ್ದಾರೆ. ‘ಎಂಎಲ್ಎ ಆಗಿ ಕ್ಷೇತ್ರದ ಅಭಿವೃದ್ಧಿ ಮಾಡುವ ಬದಲು ರಿಯಾಲಿಟಿ ಶೋಗೆ ಹೋದರೆ ಸಾಮಾನ್ಯ ಜನರ ಗತಿ ಏನು’ ಎಂದು ಅನೇಕರು ಪ್ರಶ್ನೆ ತೆಗೆದಿದ್ದಾರೆ. ಇನ್ನೂ ಕೆಲವರು, ಡ್ರೋನ್ ಪ್ರತಾಪ್, ಪ್ರದೀಪ್ ಈಶ್ವರ್ ಹಾಗೂ ರಕ್ಷಕ್ ಒಂದು ಕಡೆ ಸೇರಿದ್ದಾರೆ. ಎಂಟರ್ಟೇನ್ಮೆಂಟ್ ಹೆಚ್ಚಲಿದೆ ಎಂದು ಜಾಲತಾಣದಲ್ಲಿ ಹೇಳಿದ್ದಾರೆ.
ಕಲರ್ಫುಲ್ ಮನೆಗೆ ತಾಳ್ಮೆಯ ಬಿಳುಪು; ಎಂಟ್ರೀ ಕೊಟ್ರು ಎಮ್.ಎಲ್.ಎ ಪ್ರದೀಪು!
ಬಿಗ್ ಬಾಸ್ | ಪ್ರತಿ ರಾತ್ರಿ 9:30 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/9FB9d1eVrd
— Colors Kannada (@ColorsKannada) October 9, 2023