“ಬಿಜೆಪಿ”ಗೆ ಗುಡ್‌ ಬೈ ಹೇಳಿದ ತಮಿಳು ನಟಿ ಗೌತಮಿ ತಡಿಮಲ್ಲ

ಚೆನ್ನೈ: ತಮ್ಮ ಆಸ್ತಿ ಕಬಳಿಸಿದ ವ್ಯಕ್ತಿಗೆ ಪಕ್ಷದ ಹಿರಿಯರು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟಿ ಗೌತಮಿ ತಡಿಮಲ್ಲ ಬಿಜೆಪಿ ತೊರೆದಿದ್ದಾರೆ. 25 ವರ್ಷಗಳ ಕಾಲ ಬಿಜೆಪಿ ಸದಸ್ಯೆಯಾಗಿದ್ದ ತಮಿಳು ನಟಿ ಗೌತಮಿ ತಡಿಮಲ್ಲ ಅವರು ಇಂದು (ಅ.23) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆಗೆ ಕಾರಣವನ್ನು ಕೂಡ ತಿಳಿಸಿದ್ದಾರೆ. ಈ ಕುರಿತು ಎಕ್ಸ್‌ ನಲ್ಲಿ ಬರೆದುಕೊಂಡಿರುವ ಅವರು, “ಗೌತಮಿ ಪಕ್ಷದ ಬಗೆಗೆ ನನಗೆ ಗೌರವವಿದೆ. ಆದರೆ ಬಿಜೆಪಿಯಿಂದ ನನಗೆ ಯಾವುದೇ ಬೆಂಬಲ ಸಿಕ್ಕಿಲ್ಲ ಎಂದು ಹೇಳಿದ್ದಾರೆ, ಇದರಿಂದಾಗಿ ತನ್ನ ಜೀವನದ ದೊಡ್ಡ ಬಿಕ್ಕಟ್ಟಿನಲ್ಲಿ ಸಿಲುಕಿದೆ. ನನಗೆ ಮೋಸ ಮಾಡಿದವರನ್ನು ಪಕ್ಷದ ನಾಯಕರು ಬೆಂಬಲಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ 2021 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯು ತಮಗೆ ರಾಜಪಾಳ್ಯಂ ಕ್ಷೇತ್ರವನ್ನು ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ, ಕೊನೆ ಕ್ಷಣದಲ್ಲಿ ಸೀಟು ನೀಡಲಿಲ್ಲ. ಇಷ್ಟೆಲ್ಲಾ ಘಟನೆಗಳ ನಂತರವೂ ಪಕ್ಷಕ್ಕೆ ನಿಷ್ಠವಾಗಿಯೇ ಇದ್ದೆ.ಆದರೆ ಪಕ್ಷದಿಂದ ಬೆಂಬಲ ಸಿಗದೇ ಇದ್ದಾಗ ಅನಿವಾರ್ಯವಾಗಿ ಪಕ್ಷದಿಂದ ಹೊರಬರಬೇಕಾಯಿತು ಎಂದಿದ್ದಾರೆ.

Font Awesome Icons

Leave a Reply

Your email address will not be published. Required fields are marked *