ಭಾರತ-ಪಾಕ್ ಮ್ಯಾಚ್​ ವೇಳೆ 24 ಕ್ಯಾರೆಟ್​ ಚಿನ್ನದ ಐಫೋನ್​ ಕಳೆದುಕೊಂಡ ಊರ್ವಶಿ

ಅಕ್ಟೋಬರ್​‌ 14ರಂದು ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ-ಪಾಕ್​ ಪಂದ್ಯದ ವೇಳೆ ಬಿ-ಟೌನ್​ ಬೆಡಗಿ ಊರ್ವಶಿ ರೌಟೇಲಾ 24 ಕ್ಯಾರೆಟ್​​ ಗೋಲ್ಡ್​ ಐಫೋನ್​ ಕಳೆದುಕೊಂಡಿದ್ದಾರೆ.

ಈ ಬಗ್ಗೆ ನಟಿ ಫ್ಯಾನ್ಸ್​ ಜೊತೆ ಸಹಾಯವನ್ನು ಕೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಬರೆದು ಹಾಕಿದ್ದಾರೆ.

ಇನ್​ಸ್ಟಾಗ್ರಾಂ ಮತ್ತು ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಬರೆದು ಹಾಕಿದ ನಟಿ ಊರ್ವಶಿ ರೌಟೇಲಾ, “ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್​ ಗೋಲ್ಡ್​​ ಐಫೊನ್​ ಕಳೆದು ಹೋಗಿದೆ. ಯಾರಿಗಾದರು ಅದು ಸಿಕ್ಕಿದರೆ ದಯವಿಟ್ಟು ಸಹಾಯ ಮಾಡಿ. ನನ್ನನ್ನು ಸಂಪರ್ಕಿಸಿ” ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಮೋದಿ ಸ್ಟೇಡಿಯಂ ಮತ್ತು ಅಹಮದಾಬಾದ್​ ಪೊಲೀಸರಿಗೆ ಟ್ಯಾಗ್​ ಮಾಡಿದ್ದಾರೆ. ನಟಿಯ ಈ ಪೋಸ್ಟ್​ಗೆ ಅಹಮದಾಬಾದ್​ ಪೊಲೀಸರು ಪ್ರತಿಕ್ರಿಯಿಸಿದ್ದು, ಫೋನ್​ ವಿವರ ಎಂದು ಪ್ರತಿಕ್ರಿಯಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *