ಮಗಳ ಆತ್ಮಹತ್ಯೆ ಬಗ್ಗೆ ಮೌನ ಮುರಿದ ನಟ ವಿಜಯ್‌

ತಮಿಳು ನಟ, ಸಂಗೀತ ಸಂಯೋಜಕ ವಿಜಯ್ ಆ್ಯಂಟನಿ ಅವರ ಮಗಳು ಮೀರಾ(16) ಮಂಗಳವಾರ (ಸೆ.19) ಆತ್ಮಹತ್ಯೆ ಮಾಡಿಕೊಂಡರು. ಮಗಳ ಸಾವಿನ ಬಗ್ಗೆ ವಿಜಯ್ ಇಷ್ಟು ದಿನ ಮೌನವಾಗಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ‘ಮಗಳು ಸತ್ತಾಗಲೇ ನಾನೂ ಒಳಗಿನಿಂದ ಸತ್ತು ಹೋದೆ’ ಎಂದು ಅವರು ಹೇಳಿದ್ದಾರೆ.

‘ನನ್ನ ಮಗಳು ಮೀರಾ ಕರುಣಾಮಯಿ ಮತ್ತು ಧೈರ್ಯಶಾಲಿ ಆಗಿದ್ದಳು. ಅವಳು ಇಹಲೋಕ ತ್ಯಜಿಸಿ ಮತ, ಜಾತಿ, ಧರ್ಮ, ಹಣ, ಬಡತನ, ಅಸೂಯೆ, ನೋವು, ದುಶ್ಚಟಗಳು ಇಲ್ಲದ ಕಡೆಗೆ ಹೋಗಿದ್ದಾಳೆ. ಅವಳು ಹೋಗಿರುವ ಸ್ಥಳ ಶಾಂತವಾಗಿದೆ. ಅವಳು ಇನ್ನೂ ನನ್ನೊಂದಿಗೆ ಮಾತನಾಡುತ್ತಿದ್ದಾಳೆ ಎಂದು ನನಗೆ ಅನಿಸುತ್ತದೆ’ ಎಂದು ವಿಜಯ್ ಪತ್ರ ಆರಂಭಿಸಿದ್ದಾರೆ.

‘ಅವಳು ಮೃತಪಟ್ಟಾಗ ನಾನು ಒಳಗಿನಿಂದ ಸತ್ತುಹೋದೆ. ಈಗ ನಾನು ಅವಳೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದ್ದೇನೆ. ನಾನು ಪ್ರಾರಂಭಿಸುವ ಎಲ್ಲಾ ಒಳ್ಳೆಯ ಕಾರ್ಯವು ಅವಳ ಹೆಸರಿನಲ್ಲಿ ಇರುತ್ತದೆ. ಇವೆಲ್ಲವೂ ಅವಳಿಂದ ಪ್ರಾರಂಭ ಆಗಿದೆ ಎಂದು ನಾನು ನಂಬಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *