ಮತ್ತೆ ಬಿಗ್‌ ಬಾಸ್‌ ಮನೆಗೆ ಬರಲಿದ್ದಾರೆ ವರ್ತೂರು ಸಂತೋಷ್‌

ಬೆಂಗಳೂರು: ರಾಜ್ಯದಲ್ಲಿ ಹುಲಿ ಉಗುರು ಧರಿಸುವ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹಲವರ ಬಂಧನವೂ ನಡೆದಿದೆ. ಈ ನಡುವೆ ಕನ್ನಡದ ಬಿಗ್‌ ಬಾಸ್‌ ಅಭ್ಯರ್ಥಿ ವರ್ತೂರು ಸಂತೋಷ್‌ ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಿಗ್‌ ಬಾಸ್‌ ಮನೆಯಿಂದಲೇ ಅರೆಸ್ಟ್‌ ಆಗಿದ್ದರು. ಇದೀಗ ಜಾಮೀನು ಪಡೆದು ವಾಪಸ್‌ ಬಂದಿದ್ದು, ಮತ್ತೆ ಬಿಗ್‌ ಬಾಸ್‌ ಮನೆಯೊಳಗೆ ಪ್ರವೇಶ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಮೂಲಕ ವೀಕೆಂಡ್ ಎಪಿಸೋಡ್​ನಲ್ಲಿ ಅವರು ಪಾಲ್ಗೊಳ್ಳುತ್ತಾರೆ ಎನ್ನಲಾಗಿದೆ.

ಕೋರ್ಟ್ ಜಾಮೀನು ನೀಡುವಾಗ ಹೆಚ್ಚಿನ ಷರತ್ತನ್ನು ಹಾಕಿಲ್ಲ. ಹೀಗಾಗಿ ಅವರು ಬಿಗ್ ಬಾಸ್​ಗೆ ಮರಳಲು ಅವಕಾಶ ಇತ್ತು. ಈ ಕಾರಣದಿಂದಲೇ ಸಂತೋಷ್ ಅವರು ಬಿಗ್ ಬಾಸ್​ಗೆ ರೀ ಎಂಟ್ರಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

Font Awesome Icons

Leave a Reply

Your email address will not be published. Required fields are marked *