ಮಲೇಷ್ಯಾ ಪ್ರಧಾನಿಯನ್ನು ಭೇಟಿಯಾದ ಸೂಪರ್‌ಸ್ಟಾರ್‌ ರಜನಿ

ಚೆನ್ನೈ: ಮಲೇಷ್ಯಾದಲ್ಲಿ ನಟ ರಜನಿಕಾಂತ್ ಅತಿ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರು ನಟಿಸಿದ ಪ್ರತಿ ಚಿತ್ರವೂ ಮಲೆಷ್ಯಾದಲ್ಲಿ ತೆರೆಕಾಣುತ್ತದೆ. ಅದೇ ರೀತಿ ರಜನಿ ನಟನೆಯ ಕಬಾಲಿ ಚಿತ್ರಕ್ಕೆ ವಿಶೇಷ ಪ್ರದರ್ಶನ ವ್ಯವಸ್ಥೆ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಇಂತಹ ಸ್ಟಾರ್‌ ನಟ ರಜನಿಕಾಂತ್‌ ಅವರು ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ ಅವರನ್ನು ಭೇಟಿಯಾಗಿದ್ದಾರೆ.

ಮಲೇಷ್ಯಾ ಪ್ರಧಾನಿ ಅನ್ವರ್‌ ಅವರು ರಜನಿ ತಮ್ಮ ಮನೆಗೆ ಭೇಟಿ ನೀಡಿರುವ ಚಿತ್ರಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೇರು ಸಾಧಕ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಜನಿ ಅವರು ತಮ್ಮ ಚಿತ್ರಗಳಲ್ಲಿ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಸಾಥ್‌ ನೀಡಿರುವುದು ನನ್ನ ಮನ ಮುಟ್ಟಿದೆ. ರಜನಿ ಸಿನಿಮಾ ಜಗತ್ತಿನಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಬರೆದುಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *