ಯಶ್‌ ಫ್ಯಾನ್ಸ್‌ ಗೆ ಕೋಪ ತರಿಸಿದ ಟಾಲಿವುಡ್‌ ನಟ ರವಿತೇಜ ಹೇಳಿಕೆ

ಹೈದರಾಬಾದ್: ಕೆಜಿಎಫ್‌ ಚಿತ್ರ ನೋಡದವರೇ ಇಲ್ಲ ಎನ್ನಬಹುದು. ಆ ಪರಿ ಹಿಟ್‌ ಆದ ಸಿನಿಮಾ ಅದು. ದೇಶ ವಿದೇಶದೆಲ್ಲೆಡೆ ಯಶಸ್ಸು ಗಳಿಸಿದ ಚಿತ್ರವದು. ಅದರ ನಾಯಕ ರಾಕಿಂಗ್‌ ಸ್ಟಾರ್‌ ಯಶ್‌ ಕುರಿತು ಟಾಲಿವುಡ್‌ ನಟ ರವಿತೇಜ ಹೇಳಿದ ಮಾತೊಂದು ಯಶ್‌ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.

ರವಿತೇಜ ವೃತ್ತಿ ಬದುಕಿನ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾವಾಗಿರುವ ʼಟೈಗರ್‌ ನಾಗೇಶ್ವರರಾವ್‌ʼ ಚಿತ್ರದ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದೆ. ಸದ್ಯ ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ನಿರತವಾಗಿದೆ. ಪ್ರಚಾರದ ಅಂಗವಾಗಿ ನಟ ರವಿತೇಜ ಅವರು ವೆಬ್‌ ಸೈಟ್‌ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಯಶ್‌ ಬಗ್ಗೆ ಆಡಿರುವ ಮಾತು ರಾಕಿಭಾಯ್‌ ಫ್ಯಾನ್ಸ್‌ ಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಂದರ್ಶನದಲ್ಲಿ ನಟರ ಬಗ್ಗೆ ಕೇಳಿ ಅಭಿಪ್ರಾಯವನ್ನು ಕೇಳಲಾಗಿದೆ. ಮೊದಲಿಗೆ ರಾಮ್‌ ಚರಣ್‌ ಅವರಿಂದ ನೀವೇನು ಪಡೆಯುತ್ತೀರಾ ಎಂದಿದ್ದಾರೆ, “ರಾಮ್ ಚರಣ್‌ ರಿಂದ ಡ್ಯಾನ್ಸ್‌, ಅವರೊಬ್ಬ ಸೂಪರ್ ಡ್ಯಾನ್ಸರ್‌” ಎಂದಿದ್ದಾರೆ. ಪ್ರಭಾಸ್‌ ಬಗ್ಗೆ ಕೇಳಿದಾಗ “ಅವರೆಂದರೆ ಅಪಿಯರೆನ್ಸ್” ಮತ್ತು ಅವರು ಡಾರ್ಲಿಂಗ್‌ ಎಂದಿದ್ದಾರೆ.

ರಾಜಾಮೌಳಿ ಅವರು ವಿಷನ್‌ ಎಂದಿದ್ದಾರೆ. ದಳಪತಿ ವಿಜಯ್‌ ಅವರು ಕೂಡ ಒಬ್ಬ ಅದ್ಭುತ ಡ್ಯಾನ್ಸರ್‌ ಎಂದು ರವಿತೇಜ ಹೇಳಿದ್ದಾರೆ. ಇದಾದ ಬಳಿಕ ಯಶ್‌ ಬಗ್ಗೆ ಕೇಳಿದಾಗ ರವಿತೇಜ ಅವರು, “ಯಶ್‌ ಅವರದು ನಾನು ಕೆಜಿಎಫ್‌ ಮಾತ್ರ ನೋಡಿದ್ದೇನೆ. ಕೆಜಿಎಫ್‌ ನಂತಹ ಸಿನಿಮಾಗಳು ಸಿಗುವುದು ತುಂಬಾ ಅದೃಷ್ಟವೆಂದು” ಹೇಳಿದ್ದಾರೆ. ಯಶ್‌ ಅವರ ಬಗ್ಗೆ ರವಿತೇಜ ಹೇಳಿದ ರೀತಿ ಒಂದು ಬಗೆಯಲ್ಲಿ ಉಡಾಫೆಯ ವರ್ತನೆಯಂತಿತ್ತು ಎಂದು ರಾಕಿಭಾಯ್‌ ಅಭಿಮಾನಿಗಳು ಮಾಸ್‌ ಮಹಾರಾಜನ ವಿರುದ್ಧ ಗರಂ ಆಗಿದ್ದಾರೆ.

ಈ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ತರಹೇವಾರಿ ಕಮೆಂಟ್‌ಗಳು ಬರುತ್ತಿದ್ದು, ಯಶ್‌ ಸಿನಿಮಾ ನಿರ್ಮಾಣದ ಎಲ್ಲ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾಗೆ ಕೊಂಡೊಯ್ದದ್ದು ಅವರೇ ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. ರಾಜಮೌಳಿ ಅವರ ʼ ವಿಕ್ರಮಾರ್ಕುಡುʼ ಲಾಟರಿ ಇಲ್ಲದಿದ್ದರೆ ಇವರು ಯಾರೆಂದು ಗೊತ್ತಾಗುತ್ತಿರಲಿಲ್ಲ. “ಅದೃಷ್ಟ” ಎಂಬ ಒಂದೇ ಪದದಿಂದ ಒಬ್ಬ ನಟನ ಯಶಸ್ಸಿನ ಪರಿಶ್ರಮವನ್ನು ದೋಷಿಸುವುದು ಸರಿಯಲ್ಲ. ಅವರ ರಾಜ್ಯದಲ್ಲಿ 100 ಕೋಟಿಯ ಒಂದು ಪಾಲು ಕೂಡ ಇಲ್ಲ. ಯಶ್‌ ಆಂಧ್ರ ಹಾಗೂ ತೆಲಂಗಾಣದಲ್ಲಿ 100 ಕೋಟಿ ಮಾಡಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ರವಿ ತೇಜ ಮಾತು ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

Font Awesome Icons

Leave a Reply

Your email address will not be published. Required fields are marked *