ಯುಐ ಟೀಸರ್ ಔಟ್: ಪ್ರೇಕ್ಷಕರ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್

ರಿಯಲ್ ಸ್ಟಾರ್‌ ಉಪೇಂದ್ರ ಅವರ ಜನ್ಮದಿನದಂದು (ಸೆ.18) ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಯುಐ ಟೀಸರ್ ಊರ್ವಶಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಮುಂದೆ ಅನಾವರಣವಾಗಿದೆ. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ದಂಪತಿ, ದುನಿಯಾ ವಿಜಯ್ ಕೂಡ ಸಾಕ್ಷಿಯಾಗಿದ್ದಾರೆ. ದೊಡ್ಡ ಪರದೆ ಮೇಲೆ ‘ಯುಐ’ ಟೀಸರ್​ ರಿಲೀಸ್ ಮಾಡಲಾಗಿದೆ. ಆದರೆ ಅದರಲ್ಲಿ ಏನೂ ಕಾಣಿಸಿಲ್ಲ. ಬರೀ ಶಬ್ದ ಕೇಳಿಸಿದೆ ಅಷ್ಟೇ.

ಉಪೇಂದ್ರ ಏನೇ ಮಾಡಿದರೂ ಅದು ತುಂಬ ಡಿಫರೆಂಟ್​ ಆಗಿರುತ್ತದೆ. ‘ಯುಐ’ ಸಿನಿಮಾದ ಟೀಸರ್​ನಲ್ಲೂ ಅದು ಮತ್ತೆ ಸಾಬೀತಾಗಿದೆ. ಕೇವಲ ಒಂದಷ್ಟು ಡೈಲಾಗ್​ಗಳು ಮತ್ತು ಇತರೆ ಶಬ್ದ ಕೇಳಿಸಿದೆ. ಅದನ್ನು ಕೇಳಿಸಿಕೊಂಡು ಅಭಿಮಾನಿಗಳು ಕಥೆಯನ್ನು ಊಹಿಸಿಕೊಳ್ಳಬೇಕು. ಆ ಮೂಲಕ ಎಲ್ಲರ ತಲೆಗೂ ಉಪೇಂದ್ರ ಕೆಲಸ ಕೊಟ್ಟಿದ್ದಾರೆ.

‘ಇದು ಮಾಮೂಲಿ ಸಿನಿಮಾ ಅಲ್ಲ. ಸಿನಿಮಾ ನೋಡಿದ ಮೇಲೆ ತಲೆ ಎತ್ತಿಕೊಂಡು ಓಡಾಡುತ್ತೀರಿ. ಈ ಚಿತ್ರದಲ್ಲಿ 90ರಷ್ಟು ಗ್ರಾಫಿಕ್ಸ್​​ ಇದೆ. ಅದಕ್ಕಾಗಿ 4-5 ಕಡೆಗಳಲ್ಲಿ ಕೆಲಸ ನಡೆಯುತ್ತಿದೆ. ಆ ಕೆಲಸ ಪರ‍್ಣ ಆಗುವ ತನಕ ನಾನು ಏನನ್ನೂ ನಿಮಗೆ ತೋರಿಸಲ್ಲ ಎಂದು ಉಪೇಂದ್ರ ಹೇಳಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *