ಇಂದು ಬಿಡುಗಡೆ ಮಾಡಿದ ಪೋಸ್ಟರ್ನಲ್ಲಿ ಪ್ರಮುಖ ಪಾತ್ರಗಳ ಸರಳ ಪರಿಚಯ ಮಾಡಿಕೊಡಲಾಗಿದೆ. ಬಾಬಿ ದೇವೊಲ್ ಅವರು ಈ ಚಿತ್ರದಲ್ಲಿ ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಮುಖದ ತುಂಬಾ ರಕ್ತ ಲೇಪಿಸಿಕೊಂಡಿರುವ ಅವರ ಪೋಸ್ಟರ್ ಬಿಡುಗಡೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪೋಸ್ಟರ್ ಹಂಚಿಕೊಂಡಿರುವ ದೇವೊಲ್, ‘ಪ್ರಾಣಿಗಳ ಶತ್ರು’ ಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಚಿತ್ರದಲ್ಲಿ ಸರಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಣಬೀರ್ ಪತ್ನಿಯಾಗಿ ತೆರೆಯ ಮೇಲೆ ಬರಲಿದ್ದಾರೆ. ಕಡಿಮೆ ಮೇಕಪ್, ಸರಳ ಸೀರೆಯಲ್ಲಿ ಸಾಮಾನ್ಯ ಗೃಹಿಣಿಯಾಗಿ ಪೋಸ್ಟರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಹಂಚಿಕೊಂಡಿರುವ ರಶ್ಮಿಕಾ ‘ನಿಮ್ಮ ಗೀತಾಂಜಲಿ’ ಎಂದಷ್ಟೇ ಬರೆದುಕೊಂಡಿದ್ದಾರೆ.