ರಿಲೀಸ್ ಆಗಿ ಕೆಲವೇ ಗಂಟೆಯಲ್ಲಿ ‘ಜವಾನ್’ ಹೆಚ್ ಡಿ ಮೂವಿ ಲೀಕ್

ನಟ ಶಾರುಖ್​ ಖಾನ್​ ಅಭಿನಯದ ‘ಜವಾನ್​’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ವಿಶ್ವಾದ್ಯಂತ ಸಾವಿರಾರು ಪರದೆಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಅಭಿಮಾನಿಗಳು ಎಂಜಾಯ್​ ಮಾಡುತ್ತಿದ್ದಾರೆ. ಸಿನಿಮಾಗೆ ಪಾಸಿಟಿವ್ ರಿವ್ಯೂ ಕೂಡಾ ಬಂದಿದೆ.

ಆದರೆ ಈಗ ಅಟ್ಲಿ ನಿರ್ದೇಶನದ ಚಿತ್ರಕ್ಕೆ ದೊಡ್ಡ ಶಾಕ್ ಸಿಕ್ಕಿದೆ. ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಜವಾನ್ ಮೂವಿಯ ಎಚ್​ಡಿ ಕಾಪಿ ಆನ್​ಲೈನ್​ನಲ್ಲಿ ಲೀಕ್ ಆಗಿದೆ.
ಇದು ಚಿತ್ರತಂಡಕ್ಕೆ ಶಾಕ್ ಕೊಟ್ಟಿದೆ.

ಕೆಲವೊಂದು ಟೊರೆಂಟ್ ಸೈಟ್​ಗಳಲ್ಲಿ ಜವಾನ್ ಸಿನಿಮಾ ಎಚ್​ಡಿ ವರ್ಷನ್ ಲೀಕ್ ಆಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ತಮಿಳ್ ರಾಕರ್ಸ್, ಟೆಲಿಗ್ರಾಂ, ಮೂವಿ ರೂಲ್ಜರ್​ನಂತರ ಪೈರಸಿ ಸೈಟ್​ನಲ್ಲಿ ಶಾರುಖ್ ಸಿನಿಮಾ ಹರಿದಾಡುತ್ತಿದೆ ಎಂದು ಫಿಲ್ಮ್ ಮೂಲಗಳು ವರದಿ ಮಾಡಿವೆ.

Font Awesome Icons

Leave a Reply

Your email address will not be published. Required fields are marked *