ಬೆಂಗಳೂರು: ನವರಾತ್ರಿ ಪ್ರಯುಕ್ತ ಕನ್ನಡದಲ್ಲಿ ‘ಘೋಸ್ಟ್’, ತಮಿಳಿನಲ್ಲಿ ‘ಲಿಯೋ’ ಹಾಗೂ ತೆಲುಗಿನಲ್ಲಿ ‘ಭಗವಂತ್ ಕೇಸರಿ’ ಸಿನಿಮಾ ರಿಲೀಸ್ ಆಗಿದೆ. ಅ.19ರಂದು ರಿಲೀಸ್ ಆದ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿವೆ. ಆದರೆ ರೇಟಿಂಗ್ ವಿಚಾರದಲ್ಲಿ ‘ಲಿಯೋʼ ಚಿತ್ರವನ್ನು ಶಿವರಾಜ್ ಕುಮಾರ್ ಅಭಿನಯದ ಕನ್ನಡ ‘ಘೋಸ್ಟ್’ ಚಿತ್ರ ಹಿಂದಿಕ್ಕಿದೆ.
ಶ್ರೀನಿ ನಿರ್ದೇಶನದ ‘ಘೋಸ್ಟ್’ ಸಿನಿಮಾ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿತ್ತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕ ಮಾಡಿದೆ. ‘ಬುಕ್ ಮೈ ಶೋ’ ಆ್ಯಪ್ನಲ್ಲಿ ಈ ಚಿತ್ರಕ್ಕೆ ಈವರೆಗೆ (ಅ.20, ಮಧ್ಯಾಹ್ನ 12 ಗಂಟೆ) 2.8 ಸಾವಿರ ಮಂದಿ ವೋಟ್ ಮಾಡಿದ್ದು, 9.2 ರೇಟಿಂಗ್ ಸಿಕ್ಕಿದೆ.
‘ಲಿಯೋ’ ಸಿನಿಮಾ ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಆದರೆ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಉತ್ತಮ ರೀತಿಯಲ್ಲಿ ಕಮಾಯಿ ಮಾಡುತ್ತಿದೆ. ಈ ಚಿತ್ರಕ್ಕೆ 1.25 ಲಕ್ಷ ಮಂದಿ ವೋಟ್ ಮಾಡಿದ್ದು, 8.5 ರೇಟಿಂಗ್ ಪಡೆದುಕೊಂಡಿದೆ.
ನಂದಮೂರಿ ಬಾಲಕೃಷ್ಣ, ಕಾಜಲ್ ಅಗರ್ವಾಲ್, ಶ್ರೀಲೀಲಾ, ಅರ್ಜುನ್ ರಾಮ್ಪಾಲ್ ಮೊದಲಾದವರು ನಟಿಸಿರುವ ‘ಭಗವಂತ್ ಕೇಸರಿ’ ಸಿನಿಮಾಗೆ 37 ಸಾವಿರ ಮಂದಿ ರೇಟಿಂಗ್ ನೀಡಿದ್ದು, 8.9 ಅಂಕ ಪಡೆದಿದೆ.