“ಲಿಯೋ” ಸಿನಿಮಾ ಇಂಟರ್ನೆಟ್​​​ನಲ್ಲಿ ಲೀಕ್

ಬೆಂಗಳೂರು: ವಿಜಯ್ ಅಭಿನಯದ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರ ಲಿಯೋ. ವಿಜಯ್ ಅಭಿಮಾನಿಗಳು ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಸಿನಿಮಾ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರ ಲಿಯೋ. ಚಿತ್ರ ಇಂದು ಬಿಡುಗಡೆಯಾಗಿದೆ. ತಮಿಳುನಾಡಿನಲ್ಲಿ ಲಿಯೋ ಸಿನಿಮಾದ ಮೊದಲ ಶೋ 9 ಗಂಟೆಗೆ ಪ್ರದರ್ಶನವಾಗಿದೆ.

ಲಿಯೋ ಚಿತ್ರದ ಮೊದಲಾರ್ಧದ ಕೆಲವು ದೃಶ್ಯಗಳನ್ನು ಸೆರೆಹಿಡಿದು ಟ್ವಿಟರ್ ಎಕ್ಸ್ ಸೈಟ್ ನಲ್ಲಿ ಹಾಕಲಾಗಿದೆ. ಅರ್ಜುನ್ ಮತ್ತು ವಿಜಯ್ ನಡುವಿನ ಹೊಡೆದಾಟದ ದೃಶ್ಯಗಳು, ವಿಜಯ್ ಪ್ರಾಣಿಯೊಂದಿಗೆ ಹೋರಾಡುವ ದೃಶ್ಯ, ವಿರಾಮದ ಸಮಯದಲ್ಲಿ ವಿಜಯ್ ಬರುವ ದೃಶ್ಯಗಳು ಹೀಗೆ ಹಲವು ದೃಶ್ಯಗಳು ವಿಡಿಯೋಗಳಾಗಿ ಬಿಡುಗಡೆಯಾಗಿದೆ.

ಅವುಗಳನ್ನು ಪೋಸ್ಟ್ ಮಾಡಿದವರ ಟ್ವಿಟರ್ ಪುಟಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ವಿಡಿಯೋಗಳನ್ನು ಇಂಟರ್ನೆಟ್‌ನಿಂದ ತೆಗೆದುಹಾಕಲಾಗಿದೆ.

Font Awesome Icons

Leave a Reply

Your email address will not be published. Required fields are marked *