ಬೆಂಗಳೂರು : ಗುಟ್ಕಾ ತಿನ್ನುವುದೇ ಆರೋಗ್ಯಕ್ಕೆ ಹಾನಿಕರ. ಇಂಥದ್ದರಲ್ಲಿ ಈ ಹಾನಿಕರ ಪದಾರ್ಥದಲ್ಲಿಯೇ ಸತ್ತ ಕಪ್ಪೆ ಮರಿ ಸಿಕ್ಕಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಗುಟ್ಕಾ ಪ್ರಿಯರಲ್ಲಿ ಆತಂಕ ಶುರುವಾಗಿದೆ. ನೀವು ತಿನ್ನೋ ಗುಟಕಾ ಎಷ್ಟರ ಮಟ್ಟಿಗೆ ಸೇಪ್ಟೀ ಇದೆ ಅಂತ ಒಮ್ಮೆ ಚೆಕ್ ಮಾಡಿಕೊಳ್ಳುವುದು ಅಗತ್ಯ.
ಕಣಕಣದಲ್ಲೂ ಕೇಸರಿ ಅನ್ನೋ ಗುಟ್ಕಾ ಪ್ಯಾಕೆಟ್ನಲ್ಲಿ ಸತ್ತ ಕಪ್ಪೆ ಸಿಕ್ಕಿದೆ. ವಿಮಲ್ ಪಾಕೆಟ್ ಓಪನ್ ಮಾಡ್ತಿದ್ದಂತೆ ಗ್ರಾಹಕ ಅಚ್ಚರಿಪಟ್ಟಿದ್ದಾನೆ. ಯಶವಂತಪುರದ ಜೆಪಿ ಪಾಕ್೯ ವಾಡ್೯ ನಲ್ಲಿರುವ ಮಂಜುನಾಥ ಕಾಂಡಿಮೆಂಟ್ಸ್ನಲ್ಲಿ ಗ್ರಾಹಕ ವಿಮಲ್ ಗುಟ್ಕಾ ಖರೀದಿ ಮಾಡಿದ್ದಾನೆ. ಅಲ್ಲಿಯೇ ಅದನ್ನು ಒಡೆದು ಬಾಯಿಗೆ ಹಾಕಿಕೊಳ್ಳುವ ವೇಳೆ ಸತ್ತ ಕಪ್ಪೆ ಇರುವುದು ಗೊತ್ತಾಗಿದೆ. ವಿಮಲ್ ಪಾಕೆಟ್ ಒಳಗೆ ಇದ್ದ ಕಪ್ಪೆ ನೋಡಿ ಗ್ರಾಹಕ ದಂಗಾಗಿದ್ದಾನೆ.