ವಿಮಾನದಲ್ಲಿ ಮಲಯಾಳಂ ನಟಿ ದಿವ್ಯಪ್ರಭಾಗೆ ಕಿರುಕುಳ

ಕೊಚ್ಚಿ: ವಿಮಾನದಲ್ಲಿ ನನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಮಲಯಾಳಂ ನಟಿ ದಿವ್ಯಪ್ರಭಾ ಇತ್ತೀಚೆಗೆ ಮುಂಬೈನಿಂದ ಕೊಚ್ಚಿಗೆ ವಿಮಾನದಲ್ಲಿ ಹೋದ ಸಮಯದಲ್ಲಿ ತಮಗೆ ಕುಡುಕ ಪ್ರಯಾಣಿಕನಿಂದ ಕಿರುಕುಳವಾಗಿದೆ ಎಂದು ದೂರು ನೀಡಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಷಯವನ್ನು ತಿಳಿಸಿರುವ ನಟಿ, ಸಹ-ಪ್ರಯಾಣಿಕನಿಂದ ಕಿರುಕುಳಕ್ಕೊಳಗಾದದ್ದನ್ನು ಬಹಿರಂಗಪಡಿಸಿದ್ದಾರೆ. ಅಕ್ಟೋಬರ್ 9, ಸೋಮವಾರ ಈ ಘಟನೆ ನಡೆದಿದ್ದು, ನಟಿ ಇದೀಗ ಅದನ್ನು ವಿವರಿಸಿದ್ದಾರೆ.

ದಿವ್ಯಪ್ರಭಾ ಅವರು ಮುಂಬೈನಿಂದ ಕೊಚ್ಚಿಗೆ ಏರ್ ಇಂಡಿಯಾ ಫ್ಲೈಟ್ AI 681 ನಲ್ಲಿ ಹೋದಾಗ ಈ ಘಟನೆ ನಡೆದಿದೆ. ರಾತ್ರಿಯ ವೇಳೆ ಪ್ರಯಾಣ ಮಾಡುವ ಸಮಯದಲ್ಲಿ ಕುಡಿದು ಬಂದ ಪ್ರಯಾಣಿಕನೊಬ್ಬ ಇವರ ಪಕ್ಕ ಕುಳಿತಿದಿದ್ದಾನೆ. ಪಕ್ಕದಲ್ಲಿ ಕುಳಿತ ಪ್ರಯಾಣಿಕ ತೀವ್ರ ಸ್ವರೂಪದಲ್ಲಿ ನನಗೆ ತೊಂದರೆ ಕೊಡಲು ಶುರು ಮಾಡಿದ್ದ. ಆ ಸಮಯದಲ್ಲಿ ನಾನು ಗಗನ ಸಖಿಯನ್ನು ಕರೆದು ಈ ವಿಷಯ ತಿಳಿಸಿದೆ. ಆದರೆ ಅಚ್ಚರಿ ಎಂದರೆ, ಅವರು ಆ ಪ್ರಯಾಣಿಕನ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು, ನನ್ನ ಸೀಟನ್ನು ಬದಲಾಯಿಸಿದರು. ಇದು ನನಗೆ ಶಾಕ್​ ಕೊಟ್ಟ ವಿಚಾರ ಎಂದಿದ್ದಾರೆ ನಟಿ.

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಸಮಸ್ಯೆಯನ್ನು ವಿಮಾನ ನಿಲ್ದಾಣ ಮತ್ತು ಏರ್‌ಲೈನ್ ಅಧಿಕಾರಿಗಳಿಗೆ ವರದಿ ಮಾಡಲಾಯಿತು. ದೂರು ಕೊಡಲು ಅಲ್ಲಿಗೆ ಹೋದಾಗ, ವಿಮಾನ ನಿಲ್ದಾಣದ ಪೊಲೀಸ್ ಸಹಾಯ ಪೋಸ್ಟ್‌ಗೆ ಹೋಗುವಂತೆ ಸೂಚಿಸಲಾಯಿತು. ಇದನ್ನು ಸುಮ್ಮನೇ ಬಿಡದ ನಾನು, ಕೇರಳ ಪೊಲೀಸರಿಗೆ ದೂರು ನೀಡಿದ್ದೇನೆ, ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದ್ದಾರೆ ನಟಿ.

Font Awesome Icons

Leave a Reply

Your email address will not be published. Required fields are marked *