ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಶಿವರಾಜ್ ಕುಮಾರ್ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಶೂಟಿಂಗ್ ನಲ್ಲಿ ಶಿವಣ್ಣ ಪಾಲ್ಗೊಂಡಿದ್ದರು. ಮಳೆಯಲ್ಲಿ ನೆನೆದಿದ್ದರಿಂದ ಹೆಚ್ಚು ಸುಸ್ತಾಗಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.
ಶಿವಣ್ಣ ತೀವ್ರ ಸುಸ್ತಾಗುತ್ತಿದ್ದಂತೆಯೇ ಅವರನ್ನು ಕೂಡಲೇ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಕಾಣಿಸಿಕೊಂಡಿದ್ದರಿಂದ ವೈದ್ಯರು ಅವರಿಗೆ ನಿನ್ನೆಯೇ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಿದ್ದಾರೆ. ಸದ್ಯ ಮನೆಯಲ್ಲಿ ಶಿವಣ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ತಪಾಸಣೆ ನಂತರ ಆತಂಕ ಪಡುವಂಥದ್ದು ಏನೂ ಆಗಿಲ್ಲ ಎಂದು ವೈದ್ಯರೇ ಸ್ಪಷ್ಟ ಪಡಿಸಿದ್ದಾರೆ.