“ಶುಕ್ರಯಾನಕ್ಕೆ” ಮುಹೂರ್ತ ನಿಗದಿ ; 2028ರ ಮಾ. 29ಕ್ಕೆ ನೌಕೆ ಉಡಾವಣೆ

ಹೊಸದಿಲ್ಲಿ: ಚಂದ್ರ, ಮಂಗಳ ಮತ್ತು ಸೂರ್ಯರ ಅಧ್ಯಯನದ ಬಳಿಕ ಭೂಮಿಯ ಅವಳಿ ಗ್ರಹ ಎಂದೇ ಖ್ಯಾತವಾದ ಶುಕ್ರನ ಅಧ್ಯಯನಕ್ಕೆ ಭಾರತ ಮುಂದಾಗಿದೆ. ಇದಕ್ಕಾಗಿ ಆರ್ಬಿಟರ್‌ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದ್ದು, 2028ರ ಮಾ. 29ರಂದು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಮಂಗಳವಾರ ಘೋಷಿಸಿದೆ.

ಈ ಯೋಜನೆಗೆ “ಶುಕ್ರಯಾನ-1′ ಎಂದು ಹೆಸರಿಡಲಾಗಿದೆ. ಶುಕ್ರ ಗ್ರಹದ ವಾತಾವರಣ, ಮೇಲ್ಪದರ, ಭೌಗೋಳಿಕ ರಚನೆ, ಸೂರ್ಯನೊಂದಿಗೆ ಶುಕ್ರ ಹೊಂದಿ ರುವ ಸಂಬಂಧವನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ.

ಉಡಾವಣೆ ಹೇಗೆ?: ಇಸ್ರೋದ ಶಕ್ತಿಶಾಲಿ ರಾಕೆಟ್‌ ಎಂದು ಕರೆಸಿಕೊಳ್ಳುವ ಎಲ್‌ಎಂವಿ ಮಾರ್ಕ್‌-3 ಮೂಲಕ ಉಡಾವಣೆ ಮಾಡ ಲಾಗುತ್ತದೆ. ನಿಗದಿತ ಕಕ್ಷೆಗೆ ನೌಕೆಯನ್ನು ಮಾರ್ಕ್‌-3 ತಲುಪಿಸ ಲಿದೆ. ಬಳಿಕ ಭೂಮಿಯನ್ನು ಸುತ್ತುತ್ತ ನೂಕುಬಲವನ್ನು ಪಡೆಯುವ ನೌಕೆಯು ಅನಂತರ ಶುಕ್ರನತ್ತ ಯಾನವನ್ನು ಮುಂದುವರಿಸಲಿದೆ. ಅದು 2028ರ ಜು. 19ರಂದು ಕಕ್ಷೆಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

 

 

Font Awesome Icons

Leave a Reply

Your email address will not be published. Required fields are marked *