ಶ್ರೀದೇವಿಯದ್ದು ಸಹಜ ಸಾವಲ್ಲ ಎಂದ ಪತಿ ಬೋನಿ ಕಪೂರ್:‌ ಹಾಗಾದರೆ ಕಾರಣವೇನು ?

ಮುಂಬೈ: ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದು ಯಶಸ್ವಿ ನಟಿಯಾಗಿ ನೆಲೆ ನಿಂತ ನಟಿ ಶ್ರೀದೇವಿ ಇಂದು ಇಲ್ಲವಿದ್ದರೂ ಕೂಡ, ಸಿನಿಮಾಗಳ ಮೂಲಕ ಅಮರರಾಗಿದ್ದಾರೆ. ಈ ಅತಿಲೋಕ ಸುಂದರಿಯನ್ನು ಭಾರತೀಯ ಚಿತ್ರರಂಗ ಸದಾ ಸ್ಮರಿಸುತ್ತದೆ. 2018 ರ ಫೆಬ್ರವರಿಯಲ್ಲಿ ಶ್ರೀದೇವಿ ಹೋಟೆಲ್‌ವೊಂದರ ಬಾತ್‌ಟಬ್‌ನಲ್ಲಿ ಬಿದ್ದು ಅಸು ನೀಗಿದರು.

ಪ್ಯಾನ್‌ ಇಂಡಿಯಾ ನಟಿ ಶ್ರೀದೇವಿಯ ಹಠಾತ್‌ ನಿಧನದ ಕುರಿತಂತೆ ಅವರ ಪತಿ ಬೋನಿ ಕಪೂರ್‌ ಕೊನೆಗೂ ಬಹಿರಂಗವಾಗಿ ಮಾತನಾಡಿದ್ದಾರೆ. ಬರೋಬ್ಬರಿ ಐದು ವರ್ಷಗಳ ಕಾಲ ಶ್ರೀದೇವಿ ನಿಧನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡದೆ ಇದ್ದ ಬೋನಿ ಕಪೂರ್‌ ಕೆಲವು ಗಮನಾರ್ಹ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಇತ್ತಿಚೇಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾನು ಚೆನ್ನಾಗಿ ಕಾಣಬೇಕೆಂಬ ವ್ಯಾಮೋಹದಿಂದ ಶ್ರೀದೇವಿ ಅವರು ಬಹಳ ಕಟ್ಟುನಿಟ್ಟಾದ ಡಯೆಟ್‌ ಮಾಡುತ್ತಿದ್ದರು, ಇದರಿಂದ ಹಲವು ದುಷ್ಪರಿಣಾಮಗಳು ಅವರಿಗೆ ಎದುರಾಗಿದ್ದವು. ಶ್ರೀದೇವಿ ಮೃತಪಟ್ಟಾಗ ಸುಮಾರು ಒಂದೆರಡು ದಿನಗಳ ನನ್ನನ್ನು ತನಿಖೆಗೆ ಒಳಪಡಿಸಿದ್ದರು. ಭಾರತೀಯ ಮಾಧ್ಯಮದವರ ಒತ್ತಡವಿದ್ದುದರಿಂದ ಈ ರೀತಿ ಮಾಡಬೇಕಾಯಿತು ಎಂದು ತನಿಖಾಧಿಕಾರಿಗಳು ಹೇಳಿದ್ದರು. ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ವಿವಿಧ ತನಿಖೆಯನ್ನು ನಾನು ಎದುರಿಸಿದ್ದೆ, ವರದಿಯಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಸ್ಪಷ್ಟವಾಯಿತು ಎಂದು ಬೋನಿ ಕಪೂರ್‌ ಹೇಳಿದ್ದಾರೆ.

ಆಕೆ ಆಗಾಗ್ಗೆ ಹಸಿವಿನಿಂದ ಬಳಲುತ್ತಿದ್ದರು; ಅವಳು ಚೆನ್ನಾಗಿ ಕಾಣಬೇಕೆಂದು ಬಯಸಿದ್ದಳು. ಅವಳಿಗೆ ಲೋ ಬಿಪಿ ಸಮಸ್ಯೆ ಇದೆ ಎಂದು ವೈದ್ಯರು ಎಚ್ಚರಿಸುತ್ತಲೇ ಇದ್ದರು. ಚಿತ್ರೀಕರಣದ ವೇಳೆ ಶ್ರೀದೇವಿ ಬಾತ್‌ರೂಮ್‌ನಲ್ಲಿ ಮೂರ್ಛೆ ಬಿದ್ದು, ಹಲ್ಲು ಕೂಡಾ ಮುರಿದಿದ್ದಳು ಎಂದು ಬೋನಿ ಕಪೂರ್‌ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *