ಸಲ್ಮಾನ್ ಖಾನ್-ಶಿವರಾಜ್​ಕುಮಾರ್ ಮುಖಾಮುಖಿ

ಶಿವರಾಜ್​ಕುಮಾರ್ ಅವರು ಸದ್ಯ ‘ಘೋಸ್ಟ್’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಅ.19ರಂದು ರಿಲೀಸ್ ಆಗಲಿದೆ. ಈ ಚಿತ್ರದ ಪ್ರಚಾರಕ್ಕಾಗಿ ಶಿವಣ್ಣ ಹಾಗೂ ನಿರ್ದೇಶಕ ಶ್ರೀನಿವಾಸ್ ಅವರು ಮುಂಬೈನಲ್ಲಿದ್ದಾರೆ. ಈ ವೇಳೆ ಅವರು ಹಲವು ಸ್ಟಾರ್ ಹೀರೋಗಳನ್ನು ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗೆ ಕಮಲ್ ಹಾಸನ್ ಜೊತೆ ಶಿವಣ್ಣ ಪೋಸ್ ನೀಡಿದ್ದರು.

ಈಗ ಶಿವಣ್ಣ ಅವರು ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಇನ್ನು ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಭಾರತ-‌ಪಾಕ್ ಪಂದ್ಯವನ್ನು‌ ವೀಕ್ಷಿಸುವುದಕ್ಕಾಗಿ ಮತ್ತು ಟೀಮ್ ಇಂಡಿಯಾವನ್ನು ಹುರುದುಂಬಿಸುವುದಕ್ಕಾಗಿ ನಟ ಶಿವರಾಜ್ ಕುಮಾರ್ ಕ್ರಿಕೆಟ್ ಮೈದಾನದಲ್ಲಿದ್ದಾರೆ.

ತಾವು ಕ್ರಿಕೆಟ್ ನೋಡಲು ಹೋಗುತ್ತಿರುವ ಕುರಿತು ಶಿವರಾಜ್ ಕುಮಾರ್ ಕೆಲ ಗಂಟೆಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ‘ಇಂಡಿಯಾ-ಪಾಕಿಸ್ತಾನ ಮ್ಯಾಚ್ ಜೊತೆಯಲಿ ನಾನು. ಇದ್ಕಿಂತ ಹಬ್ಬಾ ಬೇಕಾ? ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈಗ ಮೈದಾನದಲ್ಲಿ ಕೂತು ಪಂದ್ಯ ವೀಕ್ಷಣೆ ಮಾಡುತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *