ಸೂಪರ್ ಸ್ಟಾರ್ ರಜನಿಕಾಂತ್ ಅವರ ಮತ್ತೊಂದು ಬಿಗ್ ಸಿನೆಮಾ ಘೋಷಣೆ

ತಮ್ಮ ಇತ್ತೀಚಿನ ‘ಜೈಲರ್’ ಚಿತ್ರ 500 ಕೋಟಿ ರೂ.ಗಳ ಗಡಿ ದಾಟಿದ ಕೆಲವೇ ದಿನಗಳಲ್ಲಿ, ಸೂಪರ್ ಸ್ಟಾರ್ ರಜನಿಕಾಂತ್ ಮತ್ತೊಂದು ದೊಡ್ಡ ಘೋಷಣೆ ಮಾಡಿದ್ದಾರೆ. ಸೂಪರ್ಸ್ಟಾರ್ ಈಗ ‘ತಲೈವರ್ 171’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದು ರಜನಿಕಾಂತ್ ಅವರ ಮುಂಬರುವ ಚಿತ್ರದ ತಾತ್ಕಾಲಿಕ ಶೀರ್ಷಿಕೆ. ಈ ಯೋಜನೆಯನ್ನು ಲೋಕೇಶ್ ಕನಗರಾಜ್ ನಿರ್ದೇಶಿಸಲಿದ್ದಾರೆ.

ಇಂದು(ಸೆ.11) ಸನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ತಲೈವರ್ 171 ಅನ್ನು ಇನ್‍ಸ್ಟಾ ಗ್ರಾಮ್ ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದೆ. ಪೋಸ್ಟರ್ನಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್, ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್, ಸಾಹಸ ನಿರ್ದೇಶಕ ಅನ್ಬರಿವ್ ಮತ್ತು ನಿರ್ಮಾಪಕ ಕಲಾನಿಧಿ ಮಾರನ್ ಅವರ ಹೆಸರುಗಳು ಸೇರಿದಂತೆ ಮೂಲ ಸಿಬ್ಬಂದಿ ವಿವರಗಳೊಂದಿಗೆ ‘ತಲೈವರ್ 171’ ಎಂದು ಬೋಲ್ಡ್ ಆಗಿ ಬರೆಯಲಾಗಿದೆ.

ಅಲ್ಲದೆ ‘ಆಕ್ಷನ್ ಅನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

https://www.instagram.com/p/CxCjOiNRaxw/?utm_source=ig_embed&ig_rid=a84d7688-a816-4420-85f9-05ee1e249ab7

Font Awesome Icons

Leave a Reply

Your email address will not be published. Required fields are marked *