ಸೆಪ್ಟೆಂಬರ್ 15 ರಂದು ‘ಅಸ್ಮಿತಾಯ್’ ಚಲನಚಿತ್ರ ತೆರೆಗೆ

ಮಂಗಳೂರು: ಕೊಂಕಣಿಯ ಕಲೆ, ಸಾಹಿತ್ಯ, ಸಂಸ್ಕೃತಿಯ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ, ಗಿನ್ನೆಸ್ ದಾಖಲೆ ಬರೆದ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಬ್ಯಾನರ್ ಅಡಿ, ಎರಿಕ್ ಒಝೇರಿಯೊ ಬರೆದ ಮೂಲಕತೆಗೆ ಜೊಯೆಲ್ ಪಿರೇರಾ ಚಿತ್ರಕತೆ ಮತ್ತು ಸಂಭಾಷಣೆಯ, ಯುವ ನಿರ್ದೇಶಕ ವಿಲಾಸ್ ರತ್ನಾಕರ್ ಕ್ಷತ್ರಿಯ ನಿರ್ದೇಶನದ, ಲುವಿ ಜೆ ಪಿಂಟೊ ನಿರ್ಮಾಣದ, “ಅಸ್ಮಿತಾಯ್” ಚಲನಚಿತ್ರವು ಸೆಪ್ಟೆಂಬರ್ 15 ರಂದು ತೆರೆ ಕಾಣಲಿದೆ ಎಂದು ಚಿತ್ರ ಬರಹಗಾರ ಎರಿಕ್ ಒಝೆರಿಯೊ ತಿಳಿದಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಕೊಂಕಣಿ ಜನರ ಅಸ್ಮಿತೆಯ ಹುಡುಕಾಟದ ಎಳೆಯೊಂದಿಗೆ ಸಾಗುವ ಕತೆಯು ಗೋವಾದಿಂದ ವಲಸೆ, ಕೊಂಕಣಿಯ ಶ್ರೀಮಂತ ಜನಪದ ಪರಂಪರೆಯ ದೃಶ್ಯ ವೈಭವವನ್ನು ನವಿರಾದ ಪ್ರೇಮಕತೆಯೊಂದಿಗೆ ತೋರಿಸುತ್ತದೆ. ಬಾಲರಾಜ ಗೌಡ ಸುಂದರವಾಗಿ ಸೆರೆ ಹಿಡಿದ ಕರಾವಳಿ, ಮಲೆನಾಡು ಮತ್ತು ಗೋವಾದ ದೃಶ್ಯಗಳನ್ನು ಮೇವಿನ್ ಜೊಯೆಲ್ ಪಿಂಟೊ ಉತ್ತಮವಾಗಿ ಸಂಕಲನ ಮಾಡಿದ್ದಾರೆ.

ಈ ಚಿತ್ರವು ಸೆಪ್ಟೆಂಬರ್ 15 ರಿಂದ ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ 2 ದೇಖಾವೆಗಳು ಹಾಗೂ ಸಿನೆ ಗ್ಯಾಲಕ್ಸಿ ಸುರತ್ಕಲ್, ಭಾರತ್ ಸಿನೆಮಾಸ್ ಪಡುಬಿದ್ರಿ, ಭಾರತ್ ಸಿನೆಮಾಸ್ ಮಣಿಪಾಲ, ಭಾರತ್ ಸಿನೆಮಾಸ್ ಪುತ್ತೂರು, ಭಾರತ್ ಟಾಕೀಸ್ ಬೆಳ್ತಂಗಡಿ ಮತ್ತು ಪ್ಲಾನೆಟ್ ಕಾರ್ಕಳ ಇಲ್ಲಿ ತಲಾ ಒಂದು ದೇಖಾವೆ ಮತ್ತು ಕಲ್ಪನಾ ಟಾಕೀಸ್ ಉಡುಪಿ ಹಾಗೂ ಪದ್ಮಾಂಜಲಿ ಟಾಕೀಸ್ ಹೊನ್ನಾವರದಲ್ಲಿ ತಲಾ ನಾಲ್ಕು ದೇಖಾವೆಗಳು ಪ್ರದರ್ಶನಗೊಳ್ಳಲಿವೆ.

ನಂತರ ಬೆಂಗಳೂರು, ಮುಂಬಯಿ, ಗೋವಾ ಹಾಗೂ ಯುಎಇ, ಕುವೇಯ್ಟ್, ಖತಾರ್, ಬಾಹ್ರೇಯ್ನ್, ಓಮನ್, ಇಸ್ರಾಯೆಲ್, ಜರ್ಮನಿ, ಆಸ್ಟ್ರೇಲಿಯಾ, ಆಯರ್ಲೆಂಡ್, ಅಮೇರಿಕಾ ಮತ್ತಿತರ ದೇಶಗಳಲ್ಲಿ ಪ್ರದರ್ಶನಕ್ಕೆ ಸ್ಥಳೀಯ ಸಹಕಾರದಲ್ಲಿ ಏರ್ಪಾಡು ಮಾಡಲಾಗುವುದು. ಜನರ ಕೋರಿಕೆ ಮೇರೆಗೆ ಇತರ ಕಡೆಗಳಲ್ಲೂ ಪ್ರದರ್ಶನಕ್ಕೆ ಅವಕಾಶವಿರಲಿದೆ.

ಸೆಪ್ಟೆಂಬರ್ 10 ರಂದು ಮಂಗಳೂರಿನ ಬಿಜೈ, ಪುತ್ತೂರು ಹಾಗೂ ಮಣಿಪಾಲದ ಭಾರತ್ ಸಿನೆಮಾದಲ್ಲಿ ಸಂಜೆ 4.00 ಗಂಟೆಗೆ ಏಕ ಕಾಲದಲ್ಲಿ ಮೂರು ಕಡೆ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ. ಮಂಗಳೂರಿನ ಪ್ರದರ್ಶನವನ್ನು ಗೋವಾದ ಶಾಸಕ ದಂಪತಿ ಮೈಕಲ್ ಲೋಬೊ, ಡಿಲಾಯ್ಲಾ ಲೋಬೊ ಉದ್ಘಾಟಿಸಲಿದ್ದಾರೆ ಎಂದವರು ಹೇಳಿದರು.

ಈ ವೇಳೆ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ, ಚಿತ್ರಕತೆ, ಸಂಭಾಷಣೆ – ಅಸ್ಮಿತಾಯ್ ಜೊಯೆಲ್ ಪಿರೇರಾ, ಡೆನಿಸ್ ಮೊಂತೇರೊ, ಅಶ್ವಿನ್ ಡಿಕೋಸ್ತಾ, ವೆನ್ಸಿಟಾ ಡಾಯಸ್, ಸ್ಟ್ಯಾನಿ ಆಲ್ವಾರಿಸ್, ನೆಲ್ಲು ಪೆರ್ಮನ್ನೂರ್‌ ಮತ್ತಿತರರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *