ಸೈಟ್ ವಾಪಸ್ ನೀಡುವ ಮೂಲಕ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ- ಸ್ನೇಹಮಯಿ ಕೃಷ್ಣ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು, ಅಕ್ಟೋಬರ್,1,2024 (www.justkannada.in): ಸಿಎಂ ಸಿದ್ದರಾಮಯ್ಯ ಪತ್ನಿ ಸೈಟ್ ವಾಪಸ್ ನೀಡುವ ಪತ್ರದ ಮೂಲಕ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ದೂರುದಾರ ಸ್ನೇಹಮಯಿ ಕೃಷ್ಣ, 14 ಸೈಟ್ ವಾಪಸ್ಸು ಕೊಡುತ್ತಿರುವುದು ನ್ಯಾಯಾಲಯದಲ್ಲಿ ನಮಗೆ ಅನುಕೂಲವಾಗಲಿದೆ. ನಾವು ಹೋರಾಟ ಮಾಡಿದ ಆರಂಭದಲ್ಲೇ ಅವರು ಸೈಟ್ ನೀಡಬೇಕಿತ್ತು. ಆ ಸಂದರ್ಭದಲ್ಲಿ ಸೈಟ್ ನೀಡದೆ ಭಂಡತನ ತೋರಿದ್ದರು. ಅವರ ಹಿಂಬಾಲಕರು ಹೇಳಿದರೂ ಅವರ ಮಾತು ಕೇಳಿರಲಿಲ್ಲ. ಈಗ ಅವರ ಪತ್ನಿ ಮೂಲಕ ವಾಪಸ್ಸು ಕೊಡಿಸಿದ್ದಾರೆ ಎಂದರು.

ಕಾನೂನಲ್ಲಿ ಹೆಣ್ಣು ಮಕ್ಕಳು- ಗಂಡು ಮಕ್ಕಳು ಎಂಬ ಬೇಧವಿಲ್ಲ. ತಪ್ಪು ಎಸಗಿರುವುದು ಸತ್ಯವಾಗಿರುವ ಕಾರಣ ಒಪ್ಪಿಕೊಂಡಂತೆ ಆಗಿದೆ. ನನ್ನ ಹೋರಾಟ ಕೇವಲ 14 ಸೈಟ್ ವಾಪಸ್ ಕೊಡಿಸುವುದಲ್ಲ ಮುಡಾದಲ್ಲಿ ನೂರಾರು ಮಂದಿ ವಾಪಸ್ಸು ಸೈಟ್ ಗಳನ್ನ ನೀಡಬೇಕು ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.

Key words: returning, site, CM Siddaramaiah, Snehamai Krishna

Font Awesome Icons

Leave a Reply

Your email address will not be published. Required fields are marked *